Saturday, June 6, 2026
Homeಪ್ರಮುಖ-ಸುದ್ದಿಕೊರೊನಾ ಎಫೆಕ್ಟ್​: ರಾಣಾ ದಗ್ಗುಬಾಟಿ-ಮಿಹಿಕಾ ಬಜಾಜ್ ವಿವಾಹ ಮುಂದೂಡಿಕೆ

ಕೊರೊನಾ ಎಫೆಕ್ಟ್​: ರಾಣಾ ದಗ್ಗುಬಾಟಿ-ಮಿಹಿಕಾ ಬಜಾಜ್ ವಿವಾಹ ಮುಂದೂಡಿಕೆ

- Advertisement -
- Advertisement -

ಹೈದರಾಬಾದ್: ತೆಲುಗು ಖ್ಯಾತ ನಟ ರಾಣಾ ದಗ್ಗುಬಾಟಿ ಮತ್ತು ಮಿಹಿಕಾ ಬಜಾಜ್ ಅವರ ಮದುವೆ ಮುಂದಕ್ಕೆ ಹೋಗಿದೆ. ಕಳೆದ ತಿಂಗಳಷ್ಟೆ ರಾಣಾ ದಗ್ಗುಬಾಟಿ ಮತ್ತು ಮಿಹಿಕಾ ಬಜಾಜ್ ಮದುವೆಯಾಗುವುದು ಘೋಷಿಸಿದ್ದರು. ಈ ಮುಂಚೆಯ ಮಾಹಿತಿ ಪ್ರಕಾರ ರಾಣಾ ಹಾಗೂ ಮಿಹಿಕಾ ಲಾಕ್ ಡೌನ್ ನಡುವೆಯೇ ಸರಳವಾಗಿ ವಿವಾಹವಾಗುತ್ತಾರೆ ಎನ್ನಲಾಗಿತ್ತು. ಅದಕ್ಕಾಗಿ ಸಿದ್ಧತೆಗಳನ್ನು ಸಹ ಮಾಡಿಕೊಳ್ಳಲಾಗುತ್ತಿದೆ ಎಂದು ವರದಿಯಾಗಿತ್ತು.

ಆದರೆ ಈಗ ಕಟುಂಬದ ಹಿರಿಯರು ಬೇರೆಯದ್ದೇ ನಿಶ್ಚಯ ಮಾಡಿದ್ದು, ಕೊರೊನಾ ಮುಗಿದ ಮೇಲೆಯೇ ಇಬ್ಬರ ಮದುವೆ ಮಾಡುವ ನಿರ್ಣಯ ಕೈಗೊಂಡಿದ್ದಾರೆ. ಹಾಗಾಗಿ ಮದುವೆ ಮುಂದೂಡಲ್ಪಟ್ಟಿದೆ.

ಅಂದಹಾಗೆ ಈ ಇಬ್ಬರ ಮದುವೆ ಆಗಸ್ಟ್ 8 ರಂದು ನಿಶ್ಚಯ ಮಾಡಲಾಗಿತ್ತು, ಆದರೆ ಕೊರೊನಾ ಪರಿಸ್ಥಿತಿ ಬೇಗನೆ ಸರಿಹೋಗುವುದಿಲ್ಲ ಎಂಬ ಅನುಮಾನದಲ್ಲಿ ಮದುವೆಯನ್ನು ಮುಂದಕ್ಕೆ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಕೇವಲ ರಾಣಾ-ಮಿಹಿಕಾ ಮಾತ್ರವಲ್ಲದೆ, ತೆಲುಗಿನ ಮತ್ತೋರ್ವ ನಟ ನಿಖಿಲ್ ಅವರ ಮದುವೆಯೂ ಮುಂದಕ್ಕೆ ಹೋಗಿದೆ.

- Advertisement -

Latest News

error: Content is protected !!