Monday, August 31, 2026
Homeಕರಾವಳಿಸುರತ್ಕಲ್ ಟೋಲ್ ರದ್ದಾದ್ರೂ ತಪ್ಪದ ಸಮಸ್ಯೆ: ಡಿಸೆಂಬರ್ 1ರಿಂದಲೇ ಹೆಜಮಾಡಿಯಲ್ಲಿ ಹೊಸ ದರ ಜಾರಿ: ಟೋಲ್...

ಸುರತ್ಕಲ್ ಟೋಲ್ ರದ್ದಾದ್ರೂ ತಪ್ಪದ ಸಮಸ್ಯೆ: ಡಿಸೆಂಬರ್ 1ರಿಂದಲೇ ಹೆಜಮಾಡಿಯಲ್ಲಿ ಹೊಸ ದರ ಜಾರಿ: ಟೋಲ್ ದರ ಮತ್ತಷ್ಟೂ ಹೆಚ್ಚಳ

- Advertisement -
- Advertisement -

ಮಂಗಳೂರು: ನಿರಂತರ ಹೋರಾಟಕ್ಕೆ ಮಣಿದಿರುವ ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಸುರತ್ಕಲ್‌ ಟೋಲ್‌ಗೇಟ್‌ ಅನ್ನು ಕೊನೆಗೂ ರದ್ದುಮಾಡಿ ಹೆಜಮಾಡಿ ಟೋಲ್‌ಗೇಟ್‌ನೊಂದಿಗೆ ವಿಲೀನಗೊಳಿಸಿ ಆದೇಶ ಹೊರಡಿಸಿದ್ದೇನೋ ನಿಜ. ಆದ್ರೆ ಇದ್ರಿಂದ ಪ್ರಯಾಣಿಕರಿಗೆ ಮತ್ತಷ್ಟು ಹೊರೆಯೇ ಬಿದ್ದಂತಾಗಿದೆ.

ಹೌದು ಸುರತ್ಕಲ್ ನಲ್ಲಿದ್ದ ಶುಲ್ಕದ ಹೊರೆ ಭಾರವನ್ನು ನೇರವಾಗಿ ಹೆಜಮಾಡಿಗೆ ಹೊರಿಸಲಾಗಿದೆ. ಡಿಸೆಂಬರ್ 1ರಿಂದಲೇ ಹೆಜಮಾಡಿಯಲ್ಲಿ ಹೊಸ ದರ ಜಾರಿಗೆ ಬರಲಿದೆ. ಸುರತ್ಕಲ್ ಮತ್ತು ಹೆಜಮಾಡಿಯಲ್ಲಿ ಈಗ ವಿಧಿಸುತ್ತಿರುವ ಶುಲ್ಕವನ್ನು ಪೂರ್ತಿಯಾಗಿ ಕೂಡಿಸಿ, ನೇರವಾಗಿ ಹೊರೆ ಭಾರವನ್ನು ಜನರ ಮೇಲೆ ಹೊರಿಸಲಾಗಿದೆ.

ಇನ್ನು ಇದ್ರಿಂದ ಹೆಜಮಾಡಿಯಲ್ಲಿ ಆಗಬಹುದಾದ ಕಾನೂನು ಸುವ್ಯವಸ್ಥೆಯ ತೊಂದರೆಯನ್ನು ನಿಭಾಯಿಸಲು ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಮಾಡಬೇಕು ಎಂಬುದಾಗಿ ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕ ಎಚ್‌.ಎಸ್. ಲಿಂಗೇಗೌಡ ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಕೋರಿದ್ದಾರೆ.

- Advertisement -

Latest News

error: Content is protected !!