Thursday, March 28, 2024
Homeಕರಾವಳಿವಿಧಾನ ಪರಿಷತ್ ಕಲಾಪದಲ್ಲಿ ಪ್ರಸ್ತಾಪವಾದ ಸುರತ್ಕಲ್ ‌ಟೋಲ್ ವಿಚಾರ

ವಿಧಾನ ಪರಿಷತ್ ಕಲಾಪದಲ್ಲಿ ಪ್ರಸ್ತಾಪವಾದ ಸುರತ್ಕಲ್ ‌ಟೋಲ್ ವಿಚಾರ

spot_img
- Advertisement -
- Advertisement -

ಬೆಂಗಳೂರು: ಸುರತ್ಕಲ್ ಟೋಲ್ ಪ್ಲಾಜಾ‌‌ ವಿಷಯ ಇಂದು ವಿಧಾನ ಪರಿಷತ್ ಕಲಾಪದಲ್ಲಿ ಪ್ರತಿಧ್ವನಿಸಿದೆ.

ಸುರತ್ಕಲ್ ಟೋಲ್ ಗೇಟ್ ಅಧಿಕೃತವೇ ಎಂದು ಸದನದಲ್ಲಿ ರಾಜ್ಯ‌ ಸರ್ಕಾರವನ್ನು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.

ಅಲ್ಲದೇ ಟೋಲ್ ಗೇಟ್ ನಲ್ಲಿ ಬಹಳ ಕಿರುಕುಳ ಆಗುತ್ತಿದ್ದು, ಮಾನವೀಯತೆಯಿಂದಲೂ ವರ್ತಿಸುತ್ತಿಲ್ಲ, ವಿಐಪಿ ಲೈನ್ ಇದ್ದರೂ ಬಂದ್ ಮಾಡಿರುತ್ತಾರೆ ಎಂದು ಹರೀಶ್ ಕುಮಾರ್ ಸದನದಲ್ಲಿ ಗಮನ ಸೆಳೆದಿದ್ದಾರೆ.

ಹರೀಶ್ ಕುಮಾರ್ ಪ್ರಶ್ನೆಗೆ ಉತ್ತರಿಸಿರುವ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್, ಸುರತ್ಕಲ್ ಟೋಲ್ ಪ್ಲಾಜಾ ಅಧಿಕೃತವಾಗಿಯೇ ಇದೆ, ಯಾವುದಾದರೂ 60 ಕಿ.ಮೀ ಒಳಗೆ ಟೋಲ್ ಗೇಟ್ ಇರುವುದನ್ನು ತೆಗೆಯಲು ಮನವಿ ಮಾಡಿದ್ದೇವೆ, ಇವೆಲ್ಲವೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಬರುತ್ತದೆ, ಸುರತ್ಕಲ್ ಟೋಲ್ ನಲ್ಲಿ ದೌರ್ಜನ್ಯ ಆಗುತ್ತಿಲ್ಲ, ವಿಐಪಿ ಗೇಟ್ ತೆರೆದಿದ್ದರೆ ಬೇರೆ ವಾಹನಗಳೂ ಹೋಗುತ್ತವೆ ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!