Thursday, June 4, 2026
Homeತಾಜಾ ಸುದ್ದಿಖ್ಯಾತ ಪತ್ರಕರ್ತ 'ಸುನೀಲ್ ಹೆಗ್ಗರವಳ್ಳಿ' ಹೃದಯಾಘಾತದಿಂದ ನಿಧನ

ಖ್ಯಾತ ಪತ್ರಕರ್ತ ‘ಸುನೀಲ್ ಹೆಗ್ಗರವಳ್ಳಿ’ ಹೃದಯಾಘಾತದಿಂದ ನಿಧನ

- Advertisement -
- Advertisement -

ಚಿಕ್ಕಮಗಳೂರು: ಕ್ರೈಂ ವರದಿಗಾರಿಯಲ್ಲಿ ವಿಶೇಷ ಛಾಪು ಮೂಡಿಸಿದ್ದ ಸುನೀಲ್ ಹೆಗ್ಗರವಳ್ಳಿ(43) ಹೃದಯಾಘಾತದಿಂದ ಇಂದು ನಿಧರಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೆಗ್ಗರವಳ್ಳಿಯ ಸುನೀಲ್ ಅವರು ಈ ಹಿಂದೆ ರವಿ ಬೆಳಗೆರೆಯ ಶಿಷ್ಯರಾಗಿ ಮುನ್ನಲೆಗೆ ಬಂದವರು. ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಸುನಿಲ್, ಕೆಲವು ವರ್ಷಗಳ ಹಿಂದೆ ರವಿ ಬೆಳಗೆರೆ – ಸುನೀಲ್ ಹೆಗ್ಗರವಳ್ಳಿ ನಡುವೆ ವೈಮನಸ್ಸು ಉಂಟಾಗಿ ಹೊರಬಂದಿದ್ದರು. ಆ ಬಳಿಕ ರಾಷ್ಟ್ರಕೂಟ ನ್ಯೂಸ್ ಎಂಬ ಚಾನೆಲ್ ಹಾಗೂ ಚಾರ್ಲಿ ಟೈಮ್ಸ್ ಎಂಬ ಪತ್ರಿಕೆ ನಡೆಸುತ್ತಿದ್ದರು.

ಸುನೀಲ್ ಕಳೆದ ವರ್ಷ ತಮ್ಮ ಹುಟ್ಟೂರಿ ಹೆಗ್ಗರವಳ್ಳಿಯಲ್ಲಿ ಮನೆ ನಿರ್ಮಿಸಿ, ಬೆಂಗಳೂರಿನಿಂದ ಬಂದು ಅಲ್ಲಿಯೇ ನೆಲೆಸಿದ್ದರು.
ಹೀಗೆ ಹುಟ್ಟೂರಿನಲ್ಲಿದ್ದಂತ ಸುನೀಲ್ ಹೆಗ್ಗರವಳ್ಳಿಗೆ ಇಂದು ಮಧ್ಯಾಹ್ನ ತೀವ್ರ ಎದೆನೋವುಕಾಣಿಸಿಕೊಂಡಿದೆ. ಇದರಿಂದಾಗಿ ಕೂಡಲೇ ಕುಟುಂಬಸ್ಥರು ಗೋಣಿ ಬೀಡು ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ, ಮಾರ್ಗಮಧ್ಯೆ ಅಸುನೀಗಿದ್ದಾರೆ ಎಂಬುದಾಗಿ ಅವರ ನಿಕಟವರ್ತಿಗಳು ತಿಳಿಸಿದ್ದಾರೆ.

- Advertisement -

Latest News

error: Content is protected !!