Saturday, June 6, 2026
Homeಇತರಇವತ್ತು ಸುಮ್ಮನೆ ಮನೆಯಿಂದ ಹೊರಗೆ ಬಂದ್ರೆ ಬೀಳುತ್ತೆ ಏಟು, ದಾಖಲಾಗುತ್ತೆ ಕೇಸು...

ಇವತ್ತು ಸುಮ್ಮನೆ ಮನೆಯಿಂದ ಹೊರಗೆ ಬಂದ್ರೆ ಬೀಳುತ್ತೆ ಏಟು, ದಾಖಲಾಗುತ್ತೆ ಕೇಸು…

- Advertisement -
- Advertisement -

ಬೆಂಗಳೂರು ಸರ್ಕಾರದ ಆದೇಶದಂತೆ ಇವತ್ತು ರಾಜ್ಯದಾದ್ಯಂತ ಸಂಡೇ ಲಾಕ್ ಡೌನ್ ಜಾರಿಯಲ್ಲಿದೆ. ಸಂಡೇ ಲಾಕ್ ಡೌನ್ ಇರುತ್ತೆ ತಮಗೇನು ಬೇಕೂ ಅದನ್ನು ಶನಿವಾರವೇ ತೆಗೆದುಕೊಳ್ಳಿ ಅಂತಾ ಮುಂದೆನೇ ಹೇಳಿದ್ದರೂ ಕೂಡ ಮನೆಯಿಂದ ಹೊರ ಬರುವವರ ಸಂಖ್ಯೆ ಮಾತ್ರ ಕಮ್ಮಿಯಿಲ್ಲ .ಏನಾರೊಂದು ನೆಪ ಒಡ್ಡಿ ಮನೆಯಿಂದ ಬರುತ್ತಿದ್ದಾರೆ.

ಇಂತಹವರನ್ನು ಕಂಟ್ರೋಲ್ ಮಾಡೋದು ದೊಡ್ಡ ಸವಾಲಾಗಿದೆ. ಹಾಗಾಗಿ ಲಾಠಿಗೆ ಕೆಲಸ ಕೊಟ್ಟಿದ್ದಾರೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸುಮ್ಮ ಸುಮ್ಮನೆ ಮನೆಯಿಂದ ಹೊರ ಬರುವವರ ಮೇಲೆ ಕೇಸು ದಾಖಲಿಸುತ್ತಿದ್ದಾರೆ ಪೊಲೀಸರು. ಅಲ್ಲದೇ ಸುಮ್ಮ ಸುಮ್ಮನೆ ಅಡ್ಡಾಡಿದರೆ ಅಂತಹವರಿಗೆ ಲಾಠಿ ರುಚಿ ತೋರಿಸುತ್ತಿದ್ದಾರೆ. ಇಷ್ಟೆಲ್ಲಾ ಇದ್ದರೂ ಜನಕ್ಕೆ ಮಾತ್ರ ಬುದ್ಧಿ ಬಂದಿಲ್ಲ. ಕಾರಣವಲ್ಲದ ಕಾರಣಗಳನ್ನು ಇಟ್ಟುಕೊಂಡು ಮನೆಯಿಂದ ಹೊರಗೆ ಬರುತ್ತಲೇ ಇದ್ದಾರೆ. ಹಾಗಾಗಿ ಪೊಲೀಸರು ಕೂಡ ವಿಧಿಯಿಲ್ಲದೇ ತಮ್ಮ ಅಸ್ತ್ರ ಪ್ರಯೋಗಿಸುತ್ತಿದ್ದಾರೆ.

- Advertisement -

Latest News

error: Content is protected !!