Tuesday, April 30, 2024
Homeಕರಾವಳಿಬಂಟ್ವಾಳ: ಕೊರೋನಾ ಲಾಕ್ ಡೌನ್ ನಡುವೆಯೂ ಅಮ್ಮುಂಜೆಯಲ್ಲಿ ಡಿಜೆ ಹಾಕಿ ಭರ್ಜರಿ ಮದುವೆ ಪಾರ್ಟಿ- ವಿಡಿಯೋ...

ಬಂಟ್ವಾಳ: ಕೊರೋನಾ ಲಾಕ್ ಡೌನ್ ನಡುವೆಯೂ ಅಮ್ಮುಂಜೆಯಲ್ಲಿ ಡಿಜೆ ಹಾಕಿ ಭರ್ಜರಿ ಮದುವೆ ಪಾರ್ಟಿ- ವಿಡಿಯೋ ವೈರಲ್

spot_img
- Advertisement -
- Advertisement -

ಬಂಟ್ವಾಳ: ತಾಲೂಕಿನ ಅಮ್ಮುಂಜೆ ಗ್ರಾಮದಲ್ಲಿ ಅದ್ಧೂರಿಯಾಗಿ ಮದುವೆ ಪಾರ್ಟಿ ಮಾಡಿ 200ಕ್ಕೂ ಹೆಚ್ಚು ಮಂದಿ ಸಾಮೂಹಿಕ ಡ್ಯಾನ್ಸ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಮ್ಮುಂಜೆ ಗ್ರಾಮದಲ್ಲಿ ಡಿಜೆ ಹಾಕಿಕೊಂಡು ಸುಮಾರು 200ಕ್ಕೂ ಹೆಚ್ಚು ಜನರು ಮೆಹಂದಿ ಪಾರ್ಟಿಯಲ್ಲಿ ಭಾಗಿಯಾಗಿದ್ದು, ಮಾಸ್ಕ್ ಕೂಡ ಹಾಕದೇ ಯುವಕರು ಕುಣಿದು ಕುಪ್ಪಳಿಸಿದ್ದಾರೆ. ಅಲ್ಲದೇ ಸಾಮಾಜಿಕ ಅಂತರ ಉಲ್ಲಂಘಿಸಿ ಯುವಕರು ಡ್ಯಾನ್ಸ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕೊರೊನಾ ಸಂದರ್ಭದಲ್ಲಿ 50ಕ್ಕಿಂತ ಅಧಿಕ ಜನರು ಮದುವೆ, ಸಮಾರಂಭದಲ್ಲಿ ಭಾಗಿಯಾಗಬಾರದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಮದುವೆಯ ಮೊದಲ ಕಾರ್ಯಕ್ರಮವಾದ ಮೆಹಂದಿ ಶಾಸ್ತ್ರದಲ್ಲಿ ನೂರಾರು ಜನರು ಸೇರಿ ಪಾರ್ಟಿ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಎಸ್‍ಪಿ ಲಕ್ಷ್ಮಿ ಪ್ರಸಾದ್, ಶನಿವಾರ ಸಂಜೆ ಈ ಎರಡು ವಿಡಿಯೋ ಲಭ್ಯವಾಗಿದೆ. ಮದುವೆ ಮನೆಯಲ್ಲಿ ನಡೆದಿದೆ. ವಿಚಾರಣೆ ಮಾಡಿದಾಗ ಕಳೆದ ವರ್ಷ ಈ ಪಾರ್ಟಿ ಮಾಡಿರುವುದು ಎಂದು ಯುವಕರು ಹೇಳುತ್ತಿದ್ದಾರೆ. ಹೀಗಾಗಿ ನಾವು ಈ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡುತ್ತಿದ್ದೇವೆ. ಒಂದು ವೇಳೆ ಲಾಕ್‍ಡೌನ್ ಸಂದರ್ಭದಲ್ಲಿ ಈ ರೀತಿ ಪಾರ್ಟಿ ಮಾಡಿವುದು ಖಚಿತವಾದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

- Advertisement -
spot_img

Latest News

error: Content is protected !!