Saturday, May 4, 2024
Homeತಾಜಾ ಸುದ್ದಿನಾನು ಏಪ್ರಿಲ್ 3 ರಂದು ನನ್ನ ನಿರ್ಧಾರ ಮಂಡ್ಯದಲ್ಲೇ ಪ್ರಕಟಿಸುತ್ತೇನೆ: ಸಂಸದೆ ಸುಮಲತಾ ಅಂಬರೀಶ್ಘೋಷಣೆ

ನಾನು ಏಪ್ರಿಲ್ 3 ರಂದು ನನ್ನ ನಿರ್ಧಾರ ಮಂಡ್ಯದಲ್ಲೇ ಪ್ರಕಟಿಸುತ್ತೇನೆ: ಸಂಸದೆ ಸುಮಲತಾ ಅಂಬರೀಶ್ಘೋಷಣೆ

spot_img
- Advertisement -
- Advertisement -

ಬೆಂಗಳೂರು: ಚುನಾವಣೆಯಲ್ಲಿ ಸ್ಪರ್ಧೆ ಬಗ್ಗೆ ನಾನು ಏಪ್ರಿಲ್ 3 ರಂದು ನನ್ನ ನಿರ್ಧಾರ ಮಂಡ್ಯದಲ್ಲೇ ಪ್ರಕಟಿಸುತ್ತೇನೆ ಸಂಸದೆ ಸುಮಲತಾ ಅಂಬರೀಶ್ ಘೋಷಣೆ ಮಾಡಿದ್ದಾರೆ.

ನಾನು ಏಪ್ರಿಲ್ 3ರಂದು ಮಂಡ್ಯ ಜಿಲ್ಲೆಗೆ ಬರುತ್ತೇನೆ. ಅಲ್ಲಿ ಅಂದು ಎಲ್ಲರ ಸಭೆಯನ್ನು ನಡೆಸುತ್ತೇನೆ. ಅಂದಿನ ಬೆಂಬಲಿಗರ ಸಭೆಯಲ್ಲೇ ನನ್ನ ಮುಂದಿನ ನಿರ್ಧಾರ ಪ್ರಕಟಿಸೋದಾಗಿ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

ಇಂದು ಸುಮಲತಾ ಅಂಬರೀಶ್ ಅವರ ಜೆಪಿ ನಗರದ ನಿವಾಸದ ಬಳಿಯಲ್ಲಿ ಸುಮಲತಾ ಅಂಬರೀಶ್ ಅವರ ಬೆಂಬಲಿಗ ಹನೆಕೆರೆ ಶಶಿ ಎಂಬುವರು ಮಾತನಾಡಿ ಪಕ್ಷೇತರವಾಗಿ ಸ್ಪರ್ಧಿಸುವಂತೆ ಒತ್ತಾಯಿಸಿದರು.ನಾವು ಅಂದು ಬೆಂಬಲ ನೀಡಿದ್ದೇವೆ. ಮುಂದೆಯೂ ಬೆಂಬಲ ನೀಡುತ್ತೇವೆ ಎಂಬುದಾಗಿ ಘೋಷಣೆ ಮಾಡಿದರು.

ಈ ಬಳಿಕ ಮಾತನಾಡಿದ ಅವರು ಕರ್ನಾಟಕದಲ್ಲಿ ಎಲ್ಲೇ ಹೋದ್ರೂ ಅಂಬರೀಶ್ ಅಣ್ಣನ ಮಗ ಅಂತ ಗುರುತು ಹಿಡಿಯುತ್ತಾರೆ. ಜನಾಭಿಪ್ರಾಯವಿಲ್ಲದೇ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಕಳೆದ ಬಾರಿ ಚುನಾವಣೆ ಇರಬಹುದು, ಈ ಬಾರಿಯ ಚುನಾವಣೆಯಲ್ಲೂ ಹಾಗೆ. ಮಂಡ್ಯ ಜಿಲ್ಲೆಯ ನಮ್ಮ ಕುಟುಂಬವಿದ್ದಂತೆ ಎಂದರು.

ಎಲ್ಲಾ ಅವಕಾಶಗಳನ್ನು ಬಿಟ್ಟು, ನೀವೇ ಹೇಳಿ ಇವತ್ತಿನ ದಿನಕ್ಕೆ ಯಾರಾದರೂ ರಾಜಕಾರಣ ಮಂಡ್ಯ ಕೊಡಲ್ಲ, ಬೇರೆ ಕಡೆ ನಿಂತ್ಕೊಳ್ಳಿ ಅಂದ್ರೆ ಯಾರಾದ್ರೂ ಅವಕಾಶ ಬಿಡ್ತಾರಾ? ನಾನ್ಯಾಕೆ ಬೇಡೆ ಅಂದೆ ಅದು ನನ್ನ ಇದ್ರೂ, ಗೆದ್ರೂ, ಸೋತ್ರು ಅಂದು ಮಂಡ್ಯದಲ್ಲೇ ಎಂಬುದಾಗಿ ನಿರ್ಧಾರ ಕೈಗೊಂಡಿದ್ದೇನೆ. ಮಂಡ್ಯ ಕ್ಷೇತ್ರ ಬಿಟ್ಟು ಎಲ್ಲೂ ಹೋಗಲ್ಲ. ಮಂಡ್ಯ ಅಂದ್ರೆ ಅದೊಂದು ಭಾವನೆ. ಪ್ರೀತಿಯಾಗಿದೆ ಎಂಬುದಾಗಿ ಹೇಳಿದರು.

ನನಗೆ ಸ್ವಾರ್ಥ ಇದೆ ಅಂದ್ರೆ ಅದು ಮಂಡ್ಯನೇ ಬೇಕು. ಅದು ಬಿಟ್ಟು ಬೇರೆ ಬೇಡ. ಇಂದು, ಮುಂದು, ಏನೇ ಆದ್ರೂ ಅದೇ ಬೇಕು. ಆದ್ರೇ ಇವತ್ತು ಬದಲಾದ ರಾಜಕೀಯದಲ್ಲಿ ಚುನಾವಣೆ ಬಂದಿದೆ. ನಾನು ಅಂದು ಯಾವೆಲ್ಲಾ ಸವಾಲುಗಳನ್ನು ಎದುರಿಸಿದ್ದೇನೆ ಎಂಬುದು ಎಲ್ಲರಿಗೂ ಗೊತ್ತಿದೆ. ನಿಮ್ಮನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಯಾವುದೇ ನಿರ್ಧಾರ ಸುಮಲತಾ ಅಂಬರೀಶ್ ತಗೊಳ್ಳೋದಿಲ್ಲ ಎಂದರು.

ನಾನು ಏನೇ ನಿರ್ಧಾರ ಕೈಗೊಂಡರೂ, ನಿಮ್ಮನ್ನು ನೋಯಿಸುವಂತ ನಿರ್ಧಾರ ತೆಗೆದುಕೊಳ್ಳೋದಿಲ್ಲ. ನನ್ನ ನಂಬಿಕೊಂಡು ಲಕ್ಷಾಂತರ ಜನರಿದ್ದಾರೆ. ನನ್ನ ನಿರ್ಧಾರ ಇನ್ನೂ ಕೆಲವೇ ದಿನಗಳಲ್ಲಿ ಮಂಡ್ಯದಲ್ಲೇ ಸಭೆ ಕರೆದು, ನಿಮ್ಮೆಲ್ಲರ ಸಮ್ಮುಖದಲ್ಲೇ ಸ್ಪಷ್ಟನೆ ಕೊಡ್ತೀನಿ. ಒಂದು ಎರಡು ದಿನ ಕಾಲಾವಕಾಶ ಕೊಡಿ ಎಂಬುದಾಗಿ ಕೋರಿದರು.

ಮಂಡ್ಯ ಜಿಲ್ಲೆಗೆ ಏಪ್ರಿಲ್ 3ನೇ ತಾರೀಕು ಬರುತ್ತೇನೆ. ಅಲ್ಲಿ ಸಭೆ ನಡೆಸುತ್ತೇನೆ. ಅಂದೇ ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸವೇ ನನಗೆ ಆಶೀರ್ವಾದ. ನಿಮ್ಮೆಲ್ಲರ ಆಶೀರ್ವಾದ ಎಂದೆಂದಿಗೂ ನನಗೆ ಇರಲಿ ಎಂದು ಸುಮಲತಾ ಹೇಳಿದ್ದಾರೆ.

- Advertisement -
spot_img

Latest News

error: Content is protected !!