Thursday, June 4, 2026
Homeಕರಾವಳಿಮಂಗಳೂರುಸುಳ್ಯ: ಮೀನು ಹಿಡಿಯಲು ಹೋಗಿ ನೀರಿನಲ್ಲಿ ಮುಳುಗಿ ಸಾವು

ಸುಳ್ಯ: ಮೀನು ಹಿಡಿಯಲು ಹೋಗಿ ನೀರಿನಲ್ಲಿ ಮುಳುಗಿ ಸಾವು

- Advertisement -
- Advertisement -

ಸುಳ್ಯ: ಮೀನು ಹಿಡಿಯಲು ಹೋಗಿ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಸುಳ್ಯದ ಮಂಡೆಕೋಲು ಗ್ರಾಮ ಮುರೂರು ಸಮೀಪ ಪರಪ್ಪೆ ನದಿಯಲ್ಲಿ ಗ್ರಾಮದಲ್ಲಿ ನಡೆದಿದೆ.

ಈಶ್ವರ ಮಂಗಲದ ನಾಲ್ಕು ಜನ ಪರಪ್ಪೆ ನದಿಗೆ ಮೀನು ಹಿಡಿಯಲು ಬಂದಿದ್ದರು. ಈ ವೇಳೆ ನಾಲ್ವರಲ್ಲಿ ಒಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಮೃತಪಟ್ಟ ವ್ಯಕ್ತಿಯನ್ನು ಈಶ್ವರಮಂಗಲ ಪ್ರವೀಣ್ ಎಂದು ಗುರುತಿಸಲಾಗಿದೆ.


ಮೃತದೇಹವನ್ನು ಪೈಚಾರ್ ಮುಳುಗು ತಜ್ಞರ ತಂಡದವರು ನದಿಯಿಂದ ಮೇಲೆತ್ತಿದ್ದಾರೆ. ಸುಳ್ಯ ಅಸ್ಪತ್ರೆಯ ಶವಗಾರದಲ್ಲಿ ಮೃತಹೇಹವನ್ನು ಇರಿಸಲಾಗಿದೆ. ಸುಳ್ಯ ಪೋಲಿಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲು ಮಾಡಿದ್ದು ತನಿಖೆ ಕೈಗೆತ್ತಿಕೊಂಡಿದ್ದಾರೆ.

- Advertisement -

Latest News

error: Content is protected !!