Saturday, June 28, 2025
Homeಕರಾವಳಿಮಂಗಳೂರುಸುಳ್ಯ;ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ;  ಆರೋಪಿಗಳಿಗೆ ಆಶ್ರಯ ನೀಡಿದ್ದ ಇಬ್ಬರ ವಿರುದ್ಧ ಎನ್​​ಐಎ ಚಾರ್ಜ್​​ಶೀಟ್​​ ಸಲ್ಲಿಕೆ

ಸುಳ್ಯ;ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ;  ಆರೋಪಿಗಳಿಗೆ ಆಶ್ರಯ ನೀಡಿದ್ದ ಇಬ್ಬರ ವಿರುದ್ಧ ಎನ್​​ಐಎ ಚಾರ್ಜ್​​ಶೀಟ್​​ ಸಲ್ಲಿಕೆ

spot_img
- Advertisement -
- Advertisement -

ಸುಳ್ಯ;ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಆರೋಪಿಗಳಿಗೆ ಆಶ್ರಯ ನೀಡಿದ್ದ ಇಬ್ಬರ ವಿರುದ್ಧ ಎನ್​​ಐಎ ಚಾರ್ಜ್​​ಶೀಟ್​​ ಸಲ್ಲಿಕೆ ಮಾಡಿದೆ. ಪ್ರಕರಣ ಪ್ರಮುಖ ಆರೋಪಿ ಮುಸ್ತಫಾ ಪೈಚಾರ್​ಗೆ ಆಶ್ರಯ ನೀಡಿದ್ದ ಹಿನ್ನೆಲೆ ಮನ್ಸೂರ್ ಪಾಷಾ ಹಾಗೂ ಹೆಚ್​ವೈ ರಿಯಾಜ್ ವಿರುದ್ಧ ಚಾರ್ಜ್​ಶೀಟ್ ಸಲ್ಲಿಸಲಾಗಿದೆ.

ಸಕಲೇಶಪುರದಲ್ಲಿ ಮುಸ್ತಫಾ ಪೈಚಾರ್​ಗೆ ಮನ್ಸೂರ್, ರಿಯಾಜ್​ ಆಶ್ರಯ ನೀಡಿದ್ದರು. ಮೇ 5ರಂದು ಸಕಲೇಶಪುರದಲ್ಲಿ ಮುಸ್ತಫಾ ನನ್ನು ಬಂಧಿಸಿದ್ದು, ಜೂ.3ರಂದು ಮುಂಬೈ ಏರ್​​ಪೋರ್ಟ್​ನಲ್ಲಿ ರಿಯಾಜ್​ ಬಂಧಿಸಲಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ 2022ರ ಜುಲೈ 26 ರಂದು ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು ಅವರ ಕೋಳಿ ಅಂಗಡಿ ಎದುರೇ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು.

- Advertisement -
spot_img

Latest News

error: Content is protected !!