- Advertisement -
![]()
- Advertisement -
ಸುಳ್ಯ: ಮಹಡಿ ಮೇಲಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ಸಂಪಾಜೆಯ ಚೌಕಿ ಬಳಿ ನಡೆದಿದೆ. ಚೆಂಬು ಗ್ರಾಮದ ಉಂಬಳೆ ನಿವಾಸಿ ಆಗಿರುವ ಪ್ರಸ್ತುತ ಸಂಪಾಜೆಯ ಚೌಕಿ ಬಳಿಯ ಕಮಲ (85) ಮೃತ ದುರ್ದೈವಿ.
ಕಮಲ ತನ್ನ ಮನೆಯ ಮಹಡಿಯಿಂದ ಇಳಿದುಕೊಂಡು ಬರುತ್ತಿರುವಾಗ ಕಾಲು ಜಾರಿ ಬಿದ್ದು ಗಂಭೀರ ಗಾಯಗೊಂಡಿದ್ದರು.ತಕ್ಷಣ ಅವರನ್ನು ಆಂಬುಲೆನ್ಸ್ ಮೂಲಕ ಸುಳ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಕಲ್ಲುಗುಂಡಿ ಹೊರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


