Monday, April 29, 2024
Homeಕರಾವಳಿಕೊರೋನಾ ನಿಯಂತ್ರಿಸಲು ಸರಕಾರ ವಿಫಲ: ಕೆ.ಪಿ.ಸಿ.ಸಿ ಸದಸ್ಯ ವೆಂಕಪ್ಪ ಗೌಡ ಆರೋಪ

ಕೊರೋನಾ ನಿಯಂತ್ರಿಸಲು ಸರಕಾರ ವಿಫಲ: ಕೆ.ಪಿ.ಸಿ.ಸಿ ಸದಸ್ಯ ವೆಂಕಪ್ಪ ಗೌಡ ಆರೋಪ

spot_img
- Advertisement -
- Advertisement -

ಸುಳ್ಯ: ಕೊರೊನೊ ನಿಯಂತ್ರಿಸಲು ಸರಕಾರ ಪ್ರಸ್ತತ ಕೈಗೊಂಡಿರುವ ನಿಯಮ ಸರಿಯಾಗಿಲ್ಲ. ಅಲ್ಲದೆ ಜಾರಿಯಲ್ಲಿರುವ ನಿಯಮವು ಪಾಲನೆಯಾಗದೆ ಕೊರೊನೊ ನಿಯಂತ್ರಿಸಲು ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಕೆ.ಪಿ.ಸಿ.ಸಿ ಸದಸ್ಯ ಹಾಗೂ ಸುಳ್ಯ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ವೆಂಕಪ್ಪ ಗೌಡ ಆರೋಪ ಮಾಡಿದ್ದಾರೆ.

ಅವರು ಸುಳ್ಯದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಪ್ರಥಮ ಹಂತದಲ್ಲಿ ಮೋದಿ ಸರಕಾರ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮವನ್ನು ನಾವು ಮೆಚ್ಚಿದ್ದೇವೆ.ಈ ಸಂದರ್ಭದಲ್ಲಿ ಕೊರೊನೊ ನಿಯಂತ್ರಣಕ್ಕೆ ಬಂದಿತ್ತು.ಇದಕ್ಕೆ ಕಾಂಗ್ರೆಸ್ ಪಕ್ಷದ ವತಿಯಿಂದ ನಾವು ಅಭಿನಂದನೆ ಸಲ್ಲಿಸುತ್ತೇವೆ.ಆದರೆ 3.0 ಲಾಕ್ ಡೌನ್ ಮತ್ತು 4.0 ಲಾಕ್ ಡೌನ್ ಸಂಪೂರ್ಣ ವಿಫಲವಾಗಿದೆ.ಇನ್ನೊಂದಷ್ಟು ಸಮಯ ಕಟ್ಟು ನಿಟ್ಟಿನ ಲಾಕ್ ಡೌನ್ ಜಾರಿಯಲ್ಲಿರುತ್ತಿದ್ದರೆ ಕೊರೊನೊ ನಿಯಂತ್ರಣಕ್ಕೆ ಬರುತ್ತಿತ್ತು ಎಂದು ಅವರು ಹೇಳಿದರು.

ಈ ಮೊದಲು ಪ್ರಧಾನಮಂತ್ರಿ ನರೇಂದ್ರಮೋದಿಯವರು ಚಪ್ಪಾಳೆ ತಟ್ಟಲು ಸೂಚಿಸಿದಾಗ ದೇಶದ ಜನತೆ ಚಪ್ಪಾಳೆಯನ್ನು ತಟ್ಟಿದ್ದಾರೆ. ದೀಪವನ್ನು ಬೆಳಗಿಸಿ ಎಂದಾಗ ದೀಪವನ್ನು ಬೆಳಗಿಸಿದ್ದೇವೆ. ಇವೆಲ್ಲವೂ ಆದ ನಂತರವೂ ದೇಶದಲ್ಲಿ ಕೋರೋನ ಸೋಂಕಿತರ ಸಂಖ್ಯೆ ಇಂದು ಲಕ್ಷಕ್ಕೂ ಅಧಿಕ ದಾಟಿದೆ. ಅಂದು ಮಾತನಾಡಿದ ಪ್ರಧಾನಮಂತ್ರಿಯವರು ದೇಶದ ಜನತೆಯ ಹಿತದೃಷ್ಟಿಯಿಂದ ಆರ್ಥಿಕತೆ ಮುಖ್ಯವಲ್ಲ ಜನರ ಆರೋಗ್ಯ ಮುಖ್ಯವಾದದ್ದು ಎಂದು ಹೇಳಿದರು .

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಪಿಎಸ್ ಗಂಗಾಧರ್ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!