Tuesday, May 21, 2024
Homeಕರಾವಳಿಸುಳ್ಯ: ಬೆಳಿಗ್ಗೆಯಿಂದಲೇ ಮದ್ಯದಂಗಡಿಯ‌ ಮುಂದೆ ಗ್ರಾಹಕರ ಸರತಿ ಸಾಲು

ಸುಳ್ಯ: ಬೆಳಿಗ್ಗೆಯಿಂದಲೇ ಮದ್ಯದಂಗಡಿಯ‌ ಮುಂದೆ ಗ್ರಾಹಕರ ಸರತಿ ಸಾಲು

spot_img
- Advertisement -
- Advertisement -

ಇದು ಇಂದು ಸುಳ್ಯದಲ್ಲಿ ಕಂಡು ಬಂದಂತಹ ದೃಶ್ಯ. ಕಳೆದ 40 ದಿನಗಳಿಂದ ಲಾಕ್ ಡೌನ್ ಹಿನ್ನೆಲೆಯಲ್ಲಿ ತನ್ನನ್ನು ತಾನು ಬಂಧಿಸಲ್ಪಟ್ಟ ರೀತಿಯಲ್ಲಿ ಮನೆಯಲ್ಲಿ ಕಳೆಯುವಂತಹ ಪರಿಸ್ಥಿತಿ ಬಂದೊದಗಿತ್ತು. ಇದೀಗ ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಕೆಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಗೊಳಿಸಿದ್ದು ಇದರಿಂದ ಮುಕ್ತಗೊಂಡ ಸುಳ್ಯದ ಜನತೆ ಇಂದು ನಗರದಲ್ಲಿ ಜನಜಂಗುಳಿಯಲ್ಲಿ ಏರ್ಪಡಿಸಿಕೊಂಡರು.

ಎತ್ತ ನೋಡಿದರೂ ವಾಹನಗಳ ಸರತಿ ಸಾಲು ,ಜನರ ಜನಸಂದಣಿ, ಅಂಗಡಿ-ಮುಗ್ಗಟ್ಟುಗಳ ಗ್ರಾಹಕರ ಸರತಿ ಸಾಲು, ಅದೇ ರೀತಿ ಅದೆಷ್ಟೋ ಫುಟ್ವೇರ್ ಅಂಗಡಿಗಳು, ಇನ್ನಿತರ ಸಣ್ಣ ಪುಟ್ಟ ಅಂಗಡಿಗಳು, ಹಲವು ದಿನಗಳ ನಂತರ ತಮ್ಮ ತಮ್ಮ ಸಂಸ್ಥೆಗಳನ್ನು ತೆರೆಯುವ ಸಂತೋಷದ ಕ್ಷಣಗಳು. ಅದರಲ್ಲಿಯೂ ಮದ್ಯ ಪ್ರಿಯರಿಗಂತೂ ಇಂದಿನ ಈ ದಿನವನ್ನು ಅವಿಸ್ಮರಣೀಯ ದಿನದಂತೆ ಕಂಡುಕೊಂಡಂತಹ ಆ ಕ್ಷಣಗಳು.

ಮೌನದಿಂದ ಮತ್ತು ತದೇಕಚಿತ್ತದಿಂದ ಮಧ್ಯದ ಅಂಗಡಿ ಮಾಲಕರು ನಿರ್ದೇಶಿಸಿದ ಎಲ್ಲಾ ರೀತಿ-ನೀತಿಗಳನ್ನು ಅನುಸರಿಸುತ್ತಿದ್ದ ಬಂಗಿಗಳು. ಸುಳ್ಯದಲ್ಲಿ ಒಂದು ಹಬ್ಬದ ವಾತಾವರಣವನ್ನು ಸೃಷ್ಟಿಸಿದಂತೆ ಆಗಿತ್ತು. ಅದೇ ರೀತಿ ಕೆಲವು ಸರಕಾರಿ ಕಚೇರಿಗಳಲ್ಲಿ ಕೂಡ ಈ ರೀತಿಯ ಜನಜಂಗುಳಿಯ ವಾತಾವರಣಗಳನ್ನು ಕಂಡುಬಂದಿತ್ತು.

ಕುಡುಕರಿಗೆ ಸಾಥ್ ನೀಡಿದ ವಲಸೆ ಕಾರ್ಮಿಕರು

ಸುಳ್ಯ ನಗರ ಪಂಚಾಯಿತಿ ಯಲ್ಲಿ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಹೊರರಾಜ್ಯಗಳಿಗೆ ತೆರಳಲು ಬಯಸುವವರಿಗೆ ಆನ್ಲೈನ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಅವರ ನೊಂದಣಿ ಪ್ರಕ್ರಿಯೆ ನಗರಪಂಚಾಯಿತಿ ಕಚೇರಿಯಲ್ಲಿ ನಡೆಯುತ್ತಿದ್ದು ಹೊರ ರಾಜ್ಯದ ಕಾರ್ಮಿಕರು ತಮ್ಮ ತಮ್ಮ ಊರಿಗೆ ತೆರಳುವ ಅವಕಾಶಗಳು ಬಂದೊದಗಿದ ಹಿನ್ನಲೆಯಲ್ಲಿ ನಾಮುಂದು ತಾಮುಂದು ಎಂದು ತಮ್ಮ ತಮ್ಮ ಹೆಸರುಗಳನ್ನು ನೋಂದಾಯಿಸುವ ದೃಶ್ಯಗಳು ಕಂಡುಬಂದವು.

ಅದರೊಂದಿಗೆ ಸುಳ್ಯದ ಪಡಿತರ ಅಂಗಡಿಗಳಲ್ಲಿ ಪಡಿತರ ಸಾಮಗ್ರಿ ಗಾಗಿ ಜನಸಂದಣಿಯಿಂದ ಕೂಡಿತ್ತು. ಒಟ್ಟಿನಲ್ಲಿ ಬಹಳ ದಿನಗಳಿಂದ ಜನಸಾಮಾನ್ಯರಿಗೆ ಈ ಲಾಕ್ ಡೌನ್ ನಿಂದ ಅಲ್ಪಮಟ್ಟದ ಸ್ವತಂತ್ರವನ್ನು ಸಿಕ್ಕಿದೆ.ಆದರೆ ಅದನ್ನು ಸರಿಯಾಗಿ ಬಳಸಿ ಕೊಳ್ಳದಿದ್ದಲ್ಲಿ ಈ ರೀತಿಯ ಅನಾವಶ್ಯಕ ಜನಜಂಗುಳಿಯನ್ನು ನಿರ್ಮಿಸಿ ಪುನಃ ಎರಡು ವಾರಗಳ ನಂತರ ನಿರಂತರ ಮತ್ತೆ ಮೂರು ತಿಂಗಳ ಲಾಕ್ ಡೌನ್ ಗೆ ಕೊಂಡಯ್ಯಬಹುದೇನೋ ಎಂಬ ಆತಂಕವೂ ಕೂಡಾ ನಿರ್ಮಾಣವಾಗಿದೆ.

ಕೆಲವು ಸಮಯದ ಅವಸರ ಕ್ಕಾಗಿ ಕಳೆದ ಒಂದು ತಿಂಗಳ ಗೃಹ ಬಂಧನವನ್ನು ಕೆಲವರಂತೂ ಮರೆತು ಇಂದಿನ ದಿನವನ್ನು ಕೊಂಡಾಡಿದ್ದಂತೂ ಸರಿಯಲ್ಲ ಎಂಬುದು ಸಾರ್ವಜನಿಕರ ವಲಯದಲ್ಲಿ ಗುಸುಗುಸು ಕೇಳಲು ಆರಂಭಿಸಿದೆ.

- Advertisement -
spot_img

Latest News

error: Content is protected !!