- Advertisement -
- Advertisement -
ಸುಳ್ಯ: ನಿನ್ನೆ ರಾತ್ರಿ ಸುರಿದ ಧಾರಾಕಾರ ಗಾಳಿ ಮಳೆಗೆ ತಾಲೂಕಿನ ಹಲವಾರು ಕಡೆ ಮನೆಗಳಿಗರ ಹಾನಿಯಾಗಿದೆ. ಜಯನಗರದಲ್ಲಿ ಗುಲಾಬಿ ಆನಂದ ಎಂಬವರ ಮನೆಯ ಶೀಟ್ ಹಾರಿ ಹೋಗಿದ್ದು, ಮಳೆ ನೀರು ಮನೆಯೊಳಗೆ ಬಂದು ಬಟ್ಟೆ ಬರೆಗಳೆಲ್ಲ ಒದ್ದೆಯಾಗಿದೆ. ಜಯನಗರ ಉಮೇಶ ಎಂಬವರ ಮನೆಯ ಮೇಲೆ ವಿದ್ಯುತ್ ಕಂಬ ಹಾಗೂ ತೆಂಗಿನ ಮರ ಮುರಿದು ಬಿದ್ದು ತೀವ್ರ ಹಾನಿಯಾಗಿದೆ.
ಇಂದು ಶಾಸಕ ಎಸ್ ಅಂಗಾರ ಅವರು ಸುಳ್ಯ ಜಯನಗರದಲ್ಲಿ ಗಾಳಿ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ ಕುಟುಂಬಗಳಿಗೆ ಸಾಂತ್ವಾನ ಹೇಳಿದರು.
ಈ ಸಂದರ್ಭದಲ್ಲಿ ವಿನಯ ಕುಮಾರ್ ಕಂದಡ್ಕ, ಶಿಲ್ಪಾ ಜೊತೆಯಲ್ಲಿದ್ದರು
- Advertisement -