Tuesday, May 21, 2024
Homeಕರಾವಳಿಕರಾವಳಿಯ ಹಳ್ಳಿ ಹುಡುಗಿ ಈಗ ವಿವಿ ಸಿಂಡಿಕೇಟ್ ‌ಮೆಂಬರ್

ಕರಾವಳಿಯ ಹಳ್ಳಿ ಹುಡುಗಿ ಈಗ ವಿವಿ ಸಿಂಡಿಕೇಟ್ ‌ಮೆಂಬರ್

spot_img
- Advertisement -
- Advertisement -

ಹಳ್ಳಿ ಪ್ರದೇಶದ ಸಾಮಾನ್ಯ ಕುಟುಂಬದ ಹೆಣ್ಣುಮಗಳು ಈಗ ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯದ ಸಿಂಡಿಕೇಟ್ ‌ಮೆಂಬರ್ ಆಗಿ ನೇಮಕಗೊಂಡಿದ್ದಾರೆ. ದಾವಣಗೆರೆ ವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಮೈಸೂರು ವಿಶ್ವ ವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕಿ ಗೀತಾ ಕಂದಡ್ಕ ನೇಮಿಸಲ್ಪಟ್ಟಿದ್ದಾರೆ. ಗೀತಾ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ದೊಡ್ಡತೋಟ ಸಮೀಪದ ಕಂದಡ್ಕದವರು. ಗೀತಾ ಅವರು ಕ್ರೀಡಾ ಕ್ಷೇತ್ರದಲ್ಲಿ ಮತ್ತು ದೈಹಿಕ ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ಮುಂದಿನ ಮೂರು ವರ್ಷಗಳ ಅವಧಿಗೆ ಈ ನೇಮಕಾತಿ ಮಾಡಲ್ಪಟ್ಟಿದೆ.
.
ಅತ್ಯುತ್ತಮ ಕ್ರೀಡಾಪಟು ಆಗಿರುವ ಗೀತಾ ಉತ್ತಮ ವಾಲಿಬಾಲ್ ಮತ್ತು ಕಬಡ್ಡಿ ಆಟಗಾರ್ತಿ. ರಾಜ್ಯ ಮಹಿಳಾ ಕಬಡ್ಡಿ ತಂಡವನ್ನೂ ಪ್ರತಿನಿಧಿಸಿರುವ ಗೀತಾ ದೈಹಿಕ ಶಿಕ್ಷಣ ನಿರ್ದೇಶಕಿಯಾಗಿ ರಾಜ್ಯ ಮಹಿಳಾ ಕಬಡ್ಡಿ ತಂಡದ ಕೋಚ್ ಕೂಡಾ ಆಗಿ ಕಾರ್ಯನಿರ್ವಹಿಸಿದ್ದಾರೆ. ದೈಹಿಕ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಗೀತಾ ಸುಳ್ಯ ತಾಲೂಕಿನ ದೊಡ್ಡತೋಟ ಸಮೀಪದ ಕಂದಡ್ಕ ಆನಂದ ಗೌಡ ಮತ್ತು ಶ್ರೀಮತಿ ಜಯ ದಂಪತಿಯ ಪುತ್ರಿ.

ಸಣ್ಣ ವಯಸ್ಸಿನಲ್ಲಿ ಮತ್ತು ಇದೇ ಮೊದಲ ಬಾರಿಗೆ ಮಹಿಳಾ ದೈಹಿಕ ಶಿಕ್ಷಣ ನಿರ್ದೇಶಕಿಯೊಬ್ಬರು ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆಯಾಗಿರುವ ಸಾಧನೆ ಕೂಡಾ ಗೀತಾ ಅವರದ್ದಾಗಿದೆ. ಇದರ ಜೊತೆಗೆ ಗ್ರಾಮೀಣ ಪ್ರದೇಶದ ಸಾಮಾನ್ಯ ಕುಟುಂಬದಿಂದ ಬಂದ ಹೆಣ್ಣು ಮಗಳಿಗೆ ಕಿರಿಯ ವಯಸ್ಸಿನಲ್ಲೇ ದೊಡ್ಡ ಗೌರವವೊಂದು ಲಭಿಸಿದಂತಾಗಿದೆ.

- Advertisement -
spot_img

Latest News

error: Content is protected !!