ಸುಳ್ಯ: ಭಾರತ ಲಾಕ್ ಡೌನ್ ಹಿನ್ನೆಲೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಕ್ಷದ ಮುಖಂಡರುಗಳ ಸಹಕಾರದಿಂದ ಸುಮಾರು ಒಂದು ಲಕ್ಷ ರೂಗಳ ಬೆಲೆಬಾಳುವ ಆಹಾರಧಾನ್ಯಗಳ ಇರುವ 200 ಕಿಟ್ ಗಳ ವಿತರಣಾ ಕಾರ್ಯಕ್ರಮ ಸುಳ್ಯ ಯುವಜನ ಸಂಯುಕ್ತ ಮಂಡಳಿಯಲ್ಲಿ ಇಂದು ನಡೆಯಿತು.
ಈಗಾಗಲೇ ಲಾಕ್ ಡೌನ್ ಪ್ರಾರಂಭಗೊಂಡು ಸುಮಾರು ಒಂದು ತಿಂಗಳು ಆಗುತ್ತಿದ್ದು ಸ್ಥಳೀಯ ಸಂಘ-ಸಂಸ್ಥೆಗಳು, ನ.ಪಂ ಸದಸ್ಯರುಗಳು, ಧಾನಿಗಳು ಸಹಾಯ ಹಸ್ತವನ್ನು ಕಿಟ್ ವಿತರಿಸುವ ಮೂಲಕ ನೀಡಿದ್ದು, ಇದೀಗ ಎರಡನೇ ಅವಧಿಯಲ್ಲಿ ಬಡವರಿಗೆ ಸಹಕಾರಿ ಆಗಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮಕ್ಕೆ ದಲಿತ ಮುಖಂಡರಾದ ಕೃಷ್ಣಪ್ಪರವರು ವೈಯುಕ್ತಿಕವಾಗಿ 50 ಸಾವಿರ ರೂಗಳನ್ನು ನೀಡಿ ಸಹಕಾರ ನೀಡಿದ್ದಾರೆ.
ಬಾಕಿ ಮೊತ್ತವನ್ನು ಪಕ್ಷದ ಮುಖಂಡರುಗಳು ಸಹಕಾರದಿಂದ ಮಾಡಿದ್ದೇವೆ .ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ ಈ ವೇಳೆ ಮಾತನಾಡಿ ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಧನಂಜಯ ಅಡ್ಪಂಗಾಯ ,ವೆಂಕಪ್ಪಗೌಡ ,ಕೆಎಂ ಮುಸ್ತಫ,ಪಿಎ ಮಹಮ್ಮದ್,ಎಸ್ ಸಂಸುದ್ದಿನ್, ನಂದರಾಜ ಸಂಕೇಶ್, ಶಾಫೀ ಕುತ್ತ ಮಟ್ಟೆ, ಪಿಎಸ್ ಗಂಗಾಧರ್ ,ಭವಾನಿಶಂಕರ್,ದಾನಿ ಕೃಷ್ಣಪ್ಪ ಮಹಿಳಾಕಾಂಗ್ರೆಸ್ ಅದ್ಯಕ್ಷೆ ಶ್ರೀಮತಿ ಗೀತಾ ಕೋಲ್ಚಾರು ಮೊದಲಾದವರು ಉಪಸ್ಥಿತರಿದ್ದರು.ಸಾಂಕೇತಿಕವಾಗಿ ನಾಲ್ಕು ಮಂದಿಗೆ ವಿತರಿಸಲಾಯಿತು. ಉಳಿದದ್ದನ್ನು ವಾರ್ಡ್ ವಾರ್ಡ್ ಗಳಲ್ಲಿ ವಿತರಿಸಲಾಗುವುದು ಎಂದು ಮಾದ್ಯಮಕ್ಕೆ ಮಾಹಿತಿ ನೀಡಿದರು.