ಬೈಂದೂರು: ಕೋವಿಡ್ ಕಾರ್ಯಕರ್ತರ ಮೇಲೆ ಹಲ್ಲೆಗೆ ಯತ್ನಿಸಿ ದಾಂಧಲೆ ನಡೆಸಿದ ಬೆಂಗಳೂರಿನ ಪಾದರಾಯನಪುರ ಪ್ರದೇಶದ ಜನರು ಅನಕ್ಷರಸ್ಥರು ಮತ್ತು ಅವರಿಗೆ ಸೂಕ್ತ ಮಾಹಿತಿಯ ಕೊರತೆ ಇತ್ತು ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಅವರಿಗೆ ಬೈಂದೂರು ಕ್ಷೇತ್ರದ ಶಾಸಕ ಸುಕುಮಾರ ಶೆಟ್ಟಿ ಅವರು ಖಾರವಾಗಿಯೇ ತಿರುಗೇಟು ನೀಡಿದ್ದಾರೆ.
‘ಶಾಸಕ ಜಮೀರ್ ಅವರು ಸತ್ಯವಾದ ಮಾತನ್ನೇ ಹೇಳಿದ್ದಾರೆ. ಪಾದರಾಯನಪುರ ಸೇರಿದಂತೆ ಅವರ ಕ್ಷೇತ್ರದ ಜನರನ್ನು ಸಾಕ್ಷರಗೊಳಿಸುವ ಕೆಲಸಕ್ಕೆ ಜಮೀರ್ ಕೈಹಾಕಲೇ ಇಲ್ಲ, ಯಾಕೆಂದರೆ ಒಂದುವೇಳೆ ಹಾಗೆ ಮಾಡಿದ್ದಿದ್ದರೆ ಅಲ್ಲಿ ಜಮೀರ್ ಅವರು ಗೆಲ್ಲುವುದಕ್ಕೇ ಸಾಧ್ಯವಿಲ್ಲ’ ಎಂದು ಶಾಸಕ ಸುಕುಮಾರ ಶೆಟ್ಟಿ ವ್ಯಂಗ್ಯವಾಡಿದ್ದಾರೆ.
ಅವರೆಲ್ಲಾ ಇಷ್ಟು ಸಮಯದಿಂದ ಅನಕ್ಷರಸ್ಥರಾಗಿಯೇ ಇರುವಲ್ಲಿ ಜಮೀರ್ ಅವರ ಕೊಡುಗೆ ದೊಡ್ಡದಿದೆ. ಕರಾವಳಿಯಲ್ಲಿ ಇಂತಹ ಶಾಸಕರು ಇರುತ್ತಿದ್ದರೆ ಯಾವತ್ತೋ ಜನರು ಅಂತವರನ್ನು ಮನೆಗೆ ಕಳುಹಿಸುತ್ತಿದ್ದರು ಎಂದು ಸುಕುಮಾರ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.