- Advertisement -
- Advertisement -
ಬಂಟ್ವಾಳ : ಕೊರೋನಾ ವೈರಸ್ ನಿಂದ ಕಳೆದ ಭಾನುವಾರ ಮೃತಪಟ್ಟ ಮಹಿಳೆಯ ಭಾವಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವುದು ಮತ್ತು ಮೃತರ ಚಾರಿತ್ರ್ಯಹರಣ ಮಾಡಿರುವ ಹಿನ್ನಲೆಯಲ್ಲಿ ಬಂಟ್ವಾಳ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಬಂಟ್ವಾಳ ಕಸ್ಬಾ ಗ್ರಾಮ ನಿವಾಸಿ ಕೋವಿಡ್ ಸೋಂಕಿನಿಂದ ಮಂಗಳೂರಿನಲ್ಲಿ ಮೃತಪಟ್ಟಿದ್ದು, ಈ ಸಂದರ್ಭ ಸಾಮಾಜಿಕ ಜಾಲತಾಣದಲ್ಲಿ ಮಹಿಳೆ ಮತ್ತವರ ಪತಿಯ ಭಾವಚಿತ್ರವನ್ನು ಶೇರ್ ಮಾಡಿದ ಆರೋಪದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ನಿವಾಸಿ ವಿಲಿಯಂ ಪಿಂಟೊ ಮತ್ತು ಇನ್ನೊಬ್ಬ ವ್ಯಕ್ತಿ ವಿರುದ್ಧ ಬಂಟ್ವಾಳ ಹಿಂದೂ ಮುಖಂಡ ಲೋಹಿತ್ ಪಣೋಲಿಬೈಲು ಎಂಬವರು ದೂರು ನೀಡಿದ್ದಾರೆ.
ಕಳೆದ ಭಾನುವಾರ ಬಂಟ್ವಾಳದ ಮಹಿಳೆ ಮೃತಪಟ್ಟ ಕೆಲವೇ ಸಮಯದಲ್ಲಿ ವಿಲಿಯಂ ಪಿಂಟೊ ತನ್ನ ಫೇಸ್ಬುಕ್ ಖಾತೆಯಲ್ಲಿ ” ಬಂಟ್ವಾಳದಲ್ಲಿ ಕೊರೋನಾಗೆ ಮೊದಲ ಬಲಿಯಾದ ತಬ್ಲಿಘಿ ಜಮಾತ್ ನ ಸದಸ್ಯೆ” ಎಂದು ಬರೆದುಕೊಂಡು ಮೃತರ ಮತ್ತು ಆಕೆಯ ಪತಿಯ ಫೋಟೋವನ್ನು ಪೋಸ್ಟ್ ಮಾಡಿದ್ದರು.
- Advertisement -