Saturday, June 6, 2026
Homeಕರಾವಳಿಮಂಗಳೂರುಸುಳ್ಯ; ಹಿರಿಯ ಯಕ್ಷಗಾನ ಕಲಾವಿದ , ರಂಗಕರ್ಮಿ ಜೀವನ್ ರಾಂ ಸುಳ್ಯ ಅವರ ತಂದೆ ಸುಜನಾ...

ಸುಳ್ಯ; ಹಿರಿಯ ಯಕ್ಷಗಾನ ಕಲಾವಿದ , ರಂಗಕರ್ಮಿ ಜೀವನ್ ರಾಂ ಸುಳ್ಯ ಅವರ ತಂದೆ ಸುಜನಾ ಸುಳ್ಯ ವಿಧಿವಶ

- Advertisement -
- Advertisement -

ಸುಳ್ಯ; ಹಿರಿಯ ಯಕ್ಷಗಾನ ಕಲಾವಿದ , ರಂಗಕರ್ಮಿ ಜೀವನ್ ರಾಂ ಸುಳ್ಯ ಅವರ ತಂದೆ ಸುಜನಾ ಸುಳ್ಯ(89) ವಿಧಿವಶರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಸುಳ್ಯದ ಜ್ಯೋತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಮುಂಜಾನೆ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.

ಸುಜನಾ ಅವರು ಯಕ್ಷಗಾನ ಕಲಾವಿದ ಪ್ಯಾರ್ ನಾವೂರು ಅವರ ಸಹೋದರ. ಯಕ್ಷಗಾನದಲ್ಲಿ ಎಲ್ಲಾ ರೀತಿಯ ಪಾತ್ರಗಳನ್ನು ಮಾಡುತ್ತಿದ್ದ ಅವರು ಹಾಸ್ಯ ಕಲಾವಿದರಾಗಿ ಹಲವು ಪಾತ್ರಗಳಿಗೆ ಜೀವ ತುಂಬಿದ್ದರು. ವಿವಿಧ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ಹಲವಾರು ವರ್ಷಗಳ ಕಾಲ ತಿರುಗಾಟ ನಡೆಸಿದ್ದರು.

- Advertisement -

Latest News

error: Content is protected !!