- Advertisement -
![]()
- Advertisement -
ಮಂಗಳೂರು: ನಗರದ ಹೊರವಲಯದ ಶಕ್ತಿನಗರದ ಎಸ್.ಎಸ್.ಫ್ಲಾಟ್ ನಲ್ಲಿ ವಾಸ್ತವ್ಯವಿದ್ದ ಸ್ಯಾಕ್ಸೋಫೋನ್ ಕಲಾವಿದೆ ಸುಜಾತಾ ದೇವಾಡಿಗ (31) ಎಂಬುವರು ಮಂಗಳವಾರ ಸಂಜೆ ಫ್ಲಾಟ್ ನ ರೂಮ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುಜಾತ ದೇವಾಡಿಗ ಸ್ಯಾಕ್ಸೋಫೋನ್ ಕಲಾವಿದೆಯಾಗಿದ್ದು ಮಂಗಳವಾರ ಮಧ್ಯಾಹ್ನ ಕಾರ್ಯಕ್ರಮ ಮುಗಿಸಿ ಬಂದು ಮನೆಯವರೊಡನೆ ತಲೆನೋವು ಎಂದು ಹೇಳಿ ರೂಮ್ ನಲ್ಲಿ ಫ್ಯಾನ್ ಗೆ ಸೀರೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ರಾತ್ರಿ 8.30 ಯಾದರೂ ಕೋಣೆಯಿಂದ ಹೊರಗೆ ಬಾರದಿದ್ದುದನ್ನು ಕಂಡು ಪತಿ ನಿತಿನ್ ಕಿಟಕಿಯಿಂದ ನೋಡಿದಾಗ ಸುಜಾತ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡ ಕಾರಣ ತಿಳಿದುಬಂದಿಲ್ಲ.. ಸ್ಥಳಕ್ಕೆ ಕಂಕನಾಡಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿದ್ದಾರೆ. ಮೂಲತಃ ಮೂಲ್ಕಿ ಎಸ್ ವಿಟಿ ಬಳಿಯ ನಿವಾಸಿಯಾದ ಸುಜಾತ ಮುಲ್ಕಿಯಲ್ಲಿ ಓದು ಮುಗಿಸಿ ಉತ್ತಮ ಸ್ಯಾಕ್ಸೋಫೋನ್ ಕಲಾವಿದೆಯಾಗಿದ್ದರು.
- Advertisement -


