Thursday, June 4, 2026
Homeತಾಜಾ ಸುದ್ದಿಬೆಂಗಳೂರಿನಲ್ಲಿ ಸಮವಸ್ತ್ರದಲ್ಲೇ ರಸ್ತೆಯಲ್ಲಿ ಹೊಡೆದಾಡಿಕೊಂಡ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು

ಬೆಂಗಳೂರಿನಲ್ಲಿ ಸಮವಸ್ತ್ರದಲ್ಲೇ ರಸ್ತೆಯಲ್ಲಿ ಹೊಡೆದಾಡಿಕೊಂಡ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು

- Advertisement -
- Advertisement -

ಬೆಂಗಳೂರು: ಖಾಸಗಿ ಶಾಲೆಯೊಂದರ 20 ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿನಿಯರು ರಸ್ತೆಯಲ್ಲಿ ಬಡಿದಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ‌ ಸೇಂಟ್ ಮಾರ್ಕ್ ರೋಡ್ ನಲ್ಲಿ ನಿನ್ನೆ ಮಧ್ಯಾಹ್ನ ಶಾಲೆ ಮುಗಿದ ಬಳಿಕ ವಿದ್ಯಾರ್ಥಿನಿಯರು ಸಮವಸ್ತ್ರದಲ್ಲೇ ಬಡಿದಾಡಿಕೊಂಡಿದ್ದಾರೆ.

ಹೊಡೆದಾಟದಲ್ಲಿ ವಿದ್ಯಾರ್ಥಿನಿಯರ ಪೋಷಕರು ಕೂಡಾ ಭಾಗಿಯಾಗಿದ್ದು, ಸುಮಾರು ಹೊತ್ತು ಬಡಿದಾಟ ನಡೆದಿದೆ.

ರಕ್ತ ಬರುವ ರೀತಿಯಲ್ಲಿ ಬೇಸ್ ಬಾಲ್ ಸ್ಟಿಕ್ ನಲ್ಲಿ ಕೂಡಾ ವಿದ್ಯಾರ್ಥಿನಿಯರು ಹೊಡೆದಾಡಿಕೊಂಡಿದ್ದು, ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ.‌

ಕೊನೆಗೆ ವಿದ್ಯಾರ್ಥಿನಿಯರ ಹೊಡೆದಾಟವನ್ನು ಸ್ಥಳೀಯರು ಬಂದು ಬಿಡಿಸಿದ್ದಾರೆ.

ಬೆಂಗಳೂರಿನ ಅಶೋಕ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಹೊಡೆದಾಟದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -

Latest News

error: Content is protected !!