Friday, June 21, 2024
Homeಕರಾವಳಿಮಂಗಳೂರುಮಂಗಳೂರು; ಕೆಲಸದಿಂದ ತೆಗೆದು ಹಾಕಿದ ಖಾಸಗಿ ಕಂಪನಿ; ಫಿನಾಯಿಲ್‌ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಇಬ್ಬರು ಕಾರ್ಮಿಕರು

ಮಂಗಳೂರು; ಕೆಲಸದಿಂದ ತೆಗೆದು ಹಾಕಿದ ಖಾಸಗಿ ಕಂಪನಿ; ಫಿನಾಯಿಲ್‌ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಇಬ್ಬರು ಕಾರ್ಮಿಕರು

spot_img
- Advertisement -
- Advertisement -

ಮಂಗಳೂರು; : ನವಮಂಗಳೂರು ಬಂದರಿನ ಒಳಗಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 42 ಕಾರ್ಮಿಕರನ್ನು ದಿಢೀರ್  ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಕಾರ್ಮಿಕರಿಬ್ಬರು ಫಿನಾಯಿಲ್‌ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪಣಂಬೂರಿನಲ್ಲಿ ನಡೆದಿದೆ.

ಖಾಸಗಿ ಕಂಪೆನಿಯಲ್ಲಿ 6 ವರ್ಷಗಳಿಂದ ಲಾರಿಗಳಿಗೆ ಟರ್ಪಾಲ್‌ ಅಳವಡಿಸುವ ಕೆಲಸ ಮಾಡುತ್ತಿದ್ದ 42 ಕಾರ್ಮಿಕರನ್ನು ದಿಢೀರ್‌ ಕೆಲಸದಿಂದ ತೆಗೆದು ಹಾಕಲಾಗಿತ್ತು. ಇದರಿಂದ ಕಂಗಾಲಾದ  ಇಬ್ಬರು ಫಿನಾಯಿಲ್‌ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಬುಧವಾರ ಬೆಳಗ್ಗೆ ಕಾರ್ಮಿಕರು ಹಾಗೂ ಅವರ ಕುಟುಂಬ ಹಾಗೂ ಮಕ್ಕಳು ಬಂದರಿನ ಕೆ.ಕೆ. ಗೇಟ್‌ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದರು. ಮೂರ್‍ನಾಲ್ಕು ತಾಸಾದರೂ ಸಂಬಂಧಿತ ಕಂಪೆನಿಯ ಅಧಿಕಾರಿಗಳು ಸ್ಥಳಕ್ಕೆ ಬಾರದೇ ಇದ್ದಾಗ ಇಬ್ಬರು ಫಿನಾಯಿಲ್‌ ಸೇವಿಸಿದ್ದಾರೆ. ತಕ್ಷಣ ಮಾಜಿ ಮನಪಾ ಸದಸ್ಯ ರಘುವೀರ್‌ ಪಣಂಬೂರು, ಬಿಜೆಪಿ ಮುಖಂಡ ರಣ್‌ದೀಪ್‌ ಕಾಂಚನ್‌ ಮತ್ತಿತರರು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲು ಸಹಕರಿಸಿದರು.

ಇನ್ನು ಈ ವೇಳೆ ಮಾತನಾಡಿದ  ರಣ್‌ದೀಪ್‌ ಕಾಂಚನ್‌ ದಿನಕ್ಕೆ 500-600 ರೂ. ದುಡಿಯುವ ಕಾರ್ಮಿಕರನ್ನು ಏಕಾಏಕಿ ಕೆಲಸಕ್ಕೆ ಬೇಕಾದ ಪಾಸ್‌ ನೀಡದೆ ಬಂದರು ಒಳಗೆ ಹೋಗಲು ಬಿಡಲಿಲ್ಲ. ಅವರೆಲ್ಲ ಕನ್ನಡಿಗರಾಗಿದ್ದು ಇವರ ಬದಲಿಗೆ ಹಿಂದಿ ಭಾಷಿಕರನ್ನು ನಿಯೋಜಿಸಿದ್ದಾರೆ. ಇದು ರಾಜ್ಯದ ಮಂದಿಗೆ ಮಾಡಿರುವ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ.

- Advertisement -
spot_img

Latest News

error: Content is protected !!