Thursday, June 4, 2026
Homeಚಿಕ್ಕಮಗಳೂರುಚಿಕ್ಕಮಗಳೂರು : ಚಾರ್ಮಾಡಿ ಘಾಟ್ ನಲ್ಲಿ ಆತ್ಮಹತ್ಯೆಗೆ ಯತ್ನ; ಜೀವ ಉಳಿಸಿದ 112 ಪೊಲೀಸರು

ಚಿಕ್ಕಮಗಳೂರು : ಚಾರ್ಮಾಡಿ ಘಾಟ್ ನಲ್ಲಿ ಆತ್ಮಹತ್ಯೆಗೆ ಯತ್ನ; ಜೀವ ಉಳಿಸಿದ 112 ಪೊಲೀಸರು

- Advertisement -
- Advertisement -

ಚಿಕ್ಕಮಗಳೂರು : ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚಾರ್ಮಾಡಿ ಘಾಟಿಯ ಏಕಲವ್ಯ ಶಾಲೆಯ ಸಮೀಪ ಹಾಸನ ಮೂಲದ ವ್ಯಕ್ತಿಯೋರ್ವ ಹರಿತವಾದ ಆಯುಧದಿಂದ ಕುತ್ತಿಗೆ ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ಸಂಜೆ ನಡೆದಿದೆ. ಆದರೆ 112  ಸಂಚಾರಿ ಪೊಲೀಸರು ವ್ಯಕ್ತಿಯನ್ನು ರಕ್ಷಿಸಿದ್ದಾರೆ.

 ಹಾಸನ ಮೂಲದ ಮನು  ಕೊಟ್ಟಿಗೆಹಾರಕ್ಕೆ ಬಂದು ಚಾರ್ಮಾಡಿ ಘಾಟ್ ಬಳಿ ಏಕಲವ್ಯ ಶಾಲೆಯ ಸಮೀಪ ರಸ್ತೆಯಲ್ಲಿ ತನ್ನ ಕುತ್ತಿಗೆಯನ್ನು ಬ್ಲೇಡಿನಿಂದ ಕುಯ್ದು ಸ್ನೇಹಿತರಿಗೆ ವ್ಯಾಟ್ಸಾಫ್ ಮೂಲಕ ವೀಡಿಯೋ ಸಂದೇಶ ಕಳುಹಿಸಿದ್ದಾನೆ. ಆದರೆ ಅಲರ್ಟ್ ಆದ ಸ್ನೇಹಿತರು 112 ಸಂಚಾರಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.ತಕ್ಷಣ ಕಾರ್ಯ ಪ್ರವೃತ್ತರಾದ 112 ಪೊಲೀಸರು ಚಾರ್ಮಾಡಿ ಘಾಟ್ ಗೆ ತೆರಳಿ ವ್ಯಕ್ತಿಯಿಂದ ಹರಿತವಾದ ಬ್ಲೇಡ್ ಕಸಿದು ಹರಸಾಹಸ ಪಟ್ಟು ಆತನನ್ನು ಹಿಡಿದು ಬಣಕಲ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ,ಮೂಡಿಗೆರೆ ಎಂಜಿಎಂ ಆಸ್ಪತ್ರೆಯಲ್ಲಿ ಕುತ್ತಿಗೆಗೆ ವೈದ್ಯರಿಂದ ಹೊಲಿಗೆ ಹಾಕಿಸಿ ಪ್ರಾಣ ಉಳಿಸಿದ್ದಾರೆ. ಬಳಿಕ ಅವರ ಪತ್ನಿಗೆ ಕರೆ ಮಾಡಿ ಅವರೊಂದಿಗೆ ಕಳುಹಿಸಿಕೊಟ್ಟಿದ್ದಾರೆ.

ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಬಿ ಎಸ್.ಅಭಿಷೇಕ್,ದಿಲೀಪ್,ಸುಂಕ ಬೋವಿ,ಓಂಕಾರ ನಾಯ್ಕ್ ಗವಹಿಸಿದ್ದರು.ಪೊಲೀಸರ ಕ್ಷಿಪ್ರವಾದ ಕಾರ್ಯವನ್ನು ಸಾರ್ವಜನಿಕರು ಪ್ರಶಂಸಿದ್ದಾರೆ.

- Advertisement -

Latest News

error: Content is protected !!