Wednesday, June 3, 2026
Homeಕರಾವಳಿಮಂಗಳೂರು; ಕಂಬಳ ಕೋಣದ ಯಜಮಾನ ಸುಧಾಕರ ಆಳ್ವ ಮೋರ್ಲ ಕೆರೆಗೆ ಬಿದ್ದು ಸಾವು

ಮಂಗಳೂರು; ಕಂಬಳ ಕೋಣದ ಯಜಮಾನ ಸುಧಾಕರ ಆಳ್ವ ಮೋರ್ಲ ಕೆರೆಗೆ ಬಿದ್ದು ಸಾವು

- Advertisement -
- Advertisement -

ಮಂಗಳೂರು; ಉದ್ಯಮಿ ಹಾಗೂ ಕಂಬಳ ಕೋಣದ ಯಜಮಾನರಾಗಿದ್ದ ಸುಧಾಕರ ಆಳ್ವ ಮೋರ್ಲ ಕಂಬಳಕೋಡಿ (45) ಅವರು ಆಕಸ್ಮಿಕವಾಗಿ ಮನೆಯ ಪಕ್ಕದ ಕೆರೆಗೆ ಕಾಲು ಜಾರಿಬಿದ್ದು ಸಾವನ್ನಪ್ಪಿದ್ದ ದುರಂತ ಘಟನೆ ನಡೆದಿದೆ.

ಬೇಕರಿ ತಿಂಡಿ ತಿನಿಸುಗಳ ತಯಾರಕರಾಗಿ ಯುವ ಉದ್ಯಮಿಯಾಗಿದ್ದ ಸುಧಾಕರ ಆಳ್ವರು ಮಂಗಳವಾರ ಬೆಳಗ್ಗೆ 11.00 ಗಂಟೆಯಿಂದ ನಾಪತ್ತೆಯಾಗಿದ್ದರು. ಮನೆಯವರು ಹಾಗೂ ನೆರೆಕೆರೆಯವರು ಸುತ್ತು ಮುತ್ತಲು ಹುಡುಕಾಡಿದಾಗ ಮನೆಯ ಪಕ್ಕದ ಕೆರೆಯ ಬದಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಕೃಷಿ ಪರಿಕರಗಳು ಜೊತೆಗಿದ್ದು ಬಿದ್ದ ರಭಸಕ್ಕೆ ಮುಖದ ಭಾಗದಲ್ಲಿ ಗಂಭೀರ ಗಾಯಗಳಾಗಿದೆ.

ಕೃಷಿಕರಾಗಿಯೂ ಒಳ್ಳೆಯ ಹೆಸರು ಸಂಪಾದಿಸಿದ್ದ ಅವರು ಕಂಬಳ ಕೋಣಗಳ ಯಜಮಾನ ಮೋರ್ಲ ಗಿರೀಶ್ ಆಳ್ವರ ಸಹೋದರ. ಮೃತರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಮರಣೊತ್ತರ ಪರೀಕ್ಷೆಗಾಗಿ ದೇರಳಕಟ್ಟೆಯ ಕೆ. ಎಸ್. ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!