- Advertisement -
- Advertisement -
ನಾರಾವಿ : ಕೃಷಿಕರೊಬ್ಬರು ತೋಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ನಾರಾವಿ ಸಮೀಪ ನಡೆದಿದೆ.
ನಾರಾವಿ ಅಂಗರಕೋಡಿ ಲಕ್ಷ್ಮಣ ಶೆಟ್ಟಿ ಎಂಬವರ ಪುತ್ರ ಸಂತೋಷ್ (38) ಆತ್ಮಹತ್ಯೆಗೆ ಶರಣಾದ ಯುವಕ. ಕೃಷಿಕಾರಾಗಿದ್ದು ಇವರು ಇಂದು ಬೆಳಗ್ಗಿನ ಜಾವ ತಮ್ಮದೇ ತೋಟದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Advertisement -