Thursday, June 4, 2026
Homeಕರಾವಳಿನೇತ್ರಾವತಿ-ಕುಮಾರಧಾರ ನದಿಗಳ ನೀರಿನ ನೀರಿನ ಮಟ್ಟ ಗಣನೀಯ ಏರಿಕೆ; ಭಕ್ತರಿಂದ ನದಿಗಳ ಸಂಗಮ ಪುಣ್ಯಸ್ನಾನಕ್ಕೆ ಕ್ಷಣಗಣನೆ

ನೇತ್ರಾವತಿ-ಕುಮಾರಧಾರ ನದಿಗಳ ನೀರಿನ ನೀರಿನ ಮಟ್ಟ ಗಣನೀಯ ಏರಿಕೆ; ಭಕ್ತರಿಂದ ನದಿಗಳ ಸಂಗಮ ಪುಣ್ಯಸ್ನಾನಕ್ಕೆ ಕ್ಷಣಗಣನೆ

- Advertisement -
- Advertisement -

ಉಪ್ಪಿನಂಗಡಿ: ಜಿಲ್ಲೆಯಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರಮುಖ ನದಿಗಳಾದ ನೇತ್ರಾವತಿ, ಕುಮಾರಧಾರ ಉಕ್ಕಿ ಹರಿಯುತ್ತಿದೆ. ನದಿಗಳ ನೀರಿನ ಮಟ್ಟ ಅಪಾಯದ ಮಟ್ಟಕ್ಕೂ ತಲುಪುತ್ತಿದೆ. 

ನದಿಯ ನೀರಿನ ಮಟ್ಟವು ಸದ್ಯಕ್ಕೆ 29.09 ಮೀಟರ್ ನಷ್ಟು ಇದ್ದು ಅಪಾಯದ ಮಟ್ಟ 31.05 ಆಗಿದೆ.

ಇನ್ನು ನೆರೆ ನೀರು ಪಂಜಳ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ್ದು ಹೆದ್ದಾರಿಯ ಒಂದು ಬದಿಯಲ್ಲಿ ಮಾತ್ರ ವಾಹನಗಳು ಸಂಚರಿಸುತ್ತಿದೆ. ಈ ಪ್ರದೇಶದಲ್ಲಿ ಮತ್ತೊಮ್ಮೆ ಪ್ರವಾಹದ ಭೀತಿ ಎದುರಾಗಿದ್ದು, ಸ್ಥಳೀಯ ಜನರನ್ನ ಆತಂಕಕೀಡಾಗಿಸಿದೆ.

ನೇತ್ರಾವತಿ-ಕುಮಾರದಾರ ನದಿಗಳ ಸಂಗಮ ಕ್ಷೇತ್ರವಾದ ಉಪ್ಪಿನಂಗಡಿಯಲ್ಲಿ ಮೆಟ್ಟಿಲುಗಳು ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ನದಿ ನೀರು ದೇವಾಲಯದ ಆವರಣದತ್ತ ಪ್ರವೇಶಿಸುತ್ತಿದೆ. ಮುಂದಿನ ದಿನಗಳಲ್ಲಿ ಮಳೆ ಇದೇ ರೀತಿ ಮುಂದುವರಿದಲ್ಲಿ ನದಿ ಸಂಗಮವಾಗುವ ಸಾಧ್ಯತೆಯಿದೆ.

- Advertisement -

Latest News

error: Content is protected !!