Thursday, June 4, 2026
Homeಕರಾವಳಿವರ್ಷದೊಳಗೆ ಸುಬ್ರಮಣ್ಯ ಠಾಣಾ ಕಟ್ಟಡ ನಿರ್ಮಾಣ: ಗೃಹಸಚಿವ ಅರಗ ಜ್ಞಾನೇಂದ್ರ ಭರವಸೆ

ವರ್ಷದೊಳಗೆ ಸುಬ್ರಮಣ್ಯ ಠಾಣಾ ಕಟ್ಟಡ ನಿರ್ಮಾಣ: ಗೃಹಸಚಿವ ಅರಗ ಜ್ಞಾನೇಂದ್ರ ಭರವಸೆ

- Advertisement -
- Advertisement -

ಸುಬ್ರಹ್ಮಣ್ಯ:ಶಿಥಿಲಾವಸ್ಥೆಯಲ್ಲಿರುವ ಸುಬ್ರಹ್ಮಣ್ಯದ ಪೊಲೀಸ್‌ ಠಾಣೆಯನ್ನು  ಪರಿಶೀಲಿಸಿ ಮಾಹಿತಿ ಪಡೆದುಕೊಂಡಿದ್ದೇನೆ. ಇನ್ನು ಒಂದು ತಿಂಗಳೊಳಗೆ ಟೆಂಡರ್‌ ಪ್ರಕ್ರಿಯೆ ಮುಗಿಯಲಿದೆ. ಈಗಾಗಲೇ ಕ್ರಿಯಾ ಯೋಜನೆ ತಯಾರಿಸಿದ್ದು, ಒಂದು ವರ್ಷದೊಳಗೆ ಹೊಸ ಕಟ್ಟಡದಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ ನೀಡಿದ್ದಾರೆ.

ಇನ್ನು ಸೋರುವ ಛಾವಣಿಗೆ ಟರ್ಪಾಲು ಹೊದೆಸಿ ರುವ ಶಿಥಿಲ ಕಟ್ಟಡವನ್ನು, ನೂತನ ಕಟ್ಟಡ ನಿರ್ಮಾಣವಾಗಲಿರುವ ಸ್ಥಳವನ್ನು ಸಚಿವರು ವೀಕ್ಷಿಸಿದರು. ಪುತ್ತೂರು ಉಪವಿಭಾಗದ ಡಿವೈಎಸ್ಪಿ ಡಾ| ಗಾನಾ ಪಿ. ಕುಮಾರ್‌, ಸುಳ್ಯ ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ, ಸುಬ್ರಹ್ಮಣ್ಯ ಠಾಣೆಯ ಉಪನಿರೀಕ್ಷಕ ಜಂಬೂರಾಜ್‌ ಮಹಾಜನ್‌, ಸಹಾಯಕ ಉಪನಿರೀಕ್ಷಕ ಕರುಣಾಕರ ಸೇರಿದಂತೆ ಅಧಿಕಾರಿಗಳು, ಸಿಬಂದಿ ಉಪಸ್ಥಿತರಿದ್ದರು.

- Advertisement -

Latest News

error: Content is protected !!