Thursday, July 16, 2026
Homeಕರಾವಳಿಮಂಗಳೂರುಸುಬ್ರಮಣ್ಯ; ಚಲಿಸುತ್ತಿದ್ದ ರೈಲಿನಿಂದ ಜಿಗಿದು ವ್ಯಕ್ತಿ ನಾಪತ್ತೆ

ಸುಬ್ರಮಣ್ಯ; ಚಲಿಸುತ್ತಿದ್ದ ರೈಲಿನಿಂದ ಜಿಗಿದು ವ್ಯಕ್ತಿ ನಾಪತ್ತೆ

- Advertisement -
- Advertisement -

ಸುಬ್ರಮಣ್ಯ; ಚಲಿಸುತ್ತಿದ್ದ ರೈಲಿನಿಂದ ಜಿಗಿದು ವ್ಯಕ್ತಿ ನಾಪತ್ತೆಯಾಗಿರುವ ಘಟನೆ ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದ ಬಳಿ ನಡೆದಿದೆ. ಮೇ 17ರಂದು ರಾತ್ರಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಉಡುಪಿ ಜಿಲ್ಲೆಯ ಕಾಪು ತಾಲೂಕು ಕರಂದಾಡಿ ಗರಡಿ ರೋಡ್ ನಿವಾಸಿ ದೊರೈಸ್ವಾಮಿ ಅವರ ಪುತ್ರ ಮೋಹನ (43) ನಾಪತ್ತೆಯಾದ ವ್ಯಕ್ತಿ.

ಮೇ 17ರಂದು ರಾತ್ರಿ ಸುಮಾರು 10 ಗಂಟೆಗೆ ಮೈಸೂರಿಗೆ ಹೋಗುವ  ರೈಲಿನಲ್ಲಿ ಪ್ರಯಾಣಿಸುತ್ತಿದ್ದವರು ನೆಟ್ಟಣ ರೈಲು ನಿಲ್ದಾಣದಲ್ಲಿ ಚಲಿಸುತ್ತಿರುವ ರೈಲಿನಿಂದ ಜಿಗಿದು ಹೋಗಿದ್ದು ಈ ತನಕ ಮನೆಗೆ ಬಾರದೇ ಕಾಣೆಯಾಗಿದ್ದಾರೆ.ನೇರಳೆ ಬಣ್ಣದ ಶರ್ಟ್ ಹಾಗೂ ಕಾಫಿ ಬಣ್ಣದ ಪ್ಯಾಂಟ್ ಧರಿಸಿದ್ದ ಅವರು ಕೈಯಲ್ಲಿ ಹಾಗೂ ಕೊರಳಲ್ಲಿ ಕೆಂಪು ಬಣ್ಣದ ದಾರ ಕಟ್ಟಿಕೊಂಡಿದ್ದಾರೆ. ತುಳು, ತಮಿಳು, ಕನ್ನಡ, ಬ್ಯಾರಿ ಭಾಷೆ ಮಾತನಾಡುತ್ತಾರೆ. ಬಿಳಿ ಮೈ ಬಣ್ಣ, ದಪ್ಪ ಶರೀರ ಹೊಂದಿದ್ದಾರೆ ಎಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

- Advertisement -

Latest News

error: Content is protected !!