Friday, May 17, 2024
Homeತಾಜಾ ಸುದ್ದಿಕ್ಲಾಸ್ ರೂಂ ನಲ್ಲೇ ವಿವಾಹವಾದ ಜೋಡಿ: ವೈರಲ್ ಆಯ್ತು ಪಿಯುಸಿ ವಿದ್ಯಾರ್ಥಿಗಳ ಮದುವೆ ವಿಡಿಯೋ...

ಕ್ಲಾಸ್ ರೂಂ ನಲ್ಲೇ ವಿವಾಹವಾದ ಜೋಡಿ: ವೈರಲ್ ಆಯ್ತು ಪಿಯುಸಿ ವಿದ್ಯಾರ್ಥಿಗಳ ಮದುವೆ ವಿಡಿಯೋ…

spot_img
- Advertisement -
- Advertisement -

ಹೈದರಾಬಾದ್: ಪ್ರೀತಿಗೆ ಯಾವುದರ ಹಂಗಿಲ್ಲ ಅನ್ನೋ ಮಾತಿದೆ. ಕೆಲವರು ಪ್ರೀತಿಗಾಗಿ ಎಂತಹ ರಿಸ್ಕ್ ತೆಗೆದುಕೊಳ್ಳೋದಕ್ಕೆ ರೆಡಿಯಿರ್ತಾರೆ. ಅದರಲ್ಲೂ ಹದಿಹರೆಯದಲ್ಲಿ ಹುಟ್ಟುವ ಪ್ರೀತಿ ಕ್ಷಣಿಕ ಅಂತಾ ಅಂದುಕೊಳ್ಳೋರೇ ಹೆಚ್ಚು. ಆದ್ರೆ ಆಂಧ್ರ ಪ್ರದೇಶದ ಪೂರ್ವ​ ಗೋದಾವರಿ ಜಿಲ್ಲೆಯ ರಾಜಮಂಡ್ರಿ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ.

ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಓದುತ್ತಿದ್ದ ಹುಡುಗ ಹಾಗೂ ಹುಡುಗಿಯೊಬ್ಬಳು ಪರಸ್ಪರ ಪ್ರೀತಿಸುತ್ತಿದ್ದರು. ಒಬ್ಬರನ್ನೊಬ್ಬರು ತೀರಾ ಹಚ್ಚಿಕೊಂಡಿದ್ದ ಅವರಿಬ್ಬರು ಮದುವೆಯಾಗಬೇಕೆಂದು ನಿರ್ಧರಿಸಿದ್ದರು. ಲಾಕ್​ಡೌನ್​ನಿಂದ ಶಾಲಾ-ಕಾಲೇಜುಗಳೂ ಮುಚ್ಚಿದ್ದರಿಂದ ಅವರಿಬ್ಬರಿಗೆ ಭೇಟಿಯಾಗಲು ಎಲ್ಲೂ ಸರಿಯಾದ ಸ್ಥಳ ಮತ್ತು ಅವಕಾಶ ಸಿಗುತ್ತಿರಲಿಲ್ಲ. ಅವರಿಬ್ಬರ ವಿಷಯ ಹುಡುಗಿಯ ಮನೆಯಲ್ಲಿ ಗೊತ್ತಾಗಿದ್ದರಿಂದ ಮನೆಯಲ್ಲಿ ರಾದ್ಧಾಂತವೂ ಆಗಿತ್ತು. ಇನ್ನೂ 18 ವರ್ಷದ ತುಂಬದ ಅವರಿಬ್ಬರ ವರ್ತನೆಯನ್ನು ಮನೆಯವರು ಹೆಚ್ಚೇನೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.

ಹಳ್ಳಿಯ ಕಾಲೇಜಾದ್ದರಿಂದ ಆನ್​ಲೈನ್ ಕ್ಲಾಸ್​ ಮಾಡುವುದು ಕಷ್ಟವೆಂದು ಕಾಲೇಜಿನಲ್ಲೇ ಪಾಠ ಶುರುಮಾಡಲಾಗಿತ್ತು. ಹೀಗೆ, ಕಾಲೇಜಿಗೆ ಬಂದ ಅವರಿಬ್ಬರೂ ಕ್ಲಾಸ್​ ರೂಮಿನಲ್ಲೇ ಮದುವೆಯಾಗಿದ್ದಾರೆ. ಮನೆಯಲ್ಲಿ ಮದುವೆಗೆ ಒಪ್ಪುವುದಿಲ್ಲ ಎಂಬ ಭಯದಿಂದ ಹುಡುಗ ಆ ಹುಡುಗಿಗೆ ಕ್ಲಾಸ್​ ರೂಮಿನಲ್ಲಿ ತಾಳಿ ಕಟ್ಟಿದ್ದಾನೆ. ಅವರಿಬ್ಬರ ಗೆಳೆಯರ ಸಮ್ಮುಖದಲ್ಲಿ ಈ ಮದುವೆ ನಡೆದಿದೆ. ಯೂನಿಫಾರಂ ಧರಿಸಿಯೇ ಮದುವೆಯಾದ ಬಳಿಕ ಕೇಕ್ ಕತ್ತರಿಸಿ, ಸಂಭ್ರಮಾಚರಣೆಯನ್ನೂ ಮಾಡಿರುವ ವಿಡಿಯೋ ವೈರಲ್ ಆಗಿದೆ.

ಗೆಳೆಯರ ಮದುವೆಯನ್ನು ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿಕೊಂಡಿದ್ದ ಸ್ನೇಹಿತನೊಬ್ಬ ಕಾಲೇಜಿನ ಗೆಳೆಯರಿಗೆ ಆ ವಿಡಿಯೋ ಕಳುಹಿಸಿದ್ದ. ಆ ವಿಡಿಯೋ ಪ್ರಿನ್ಸಿಪಾಲ್​, ಶಿಕ್ಷಕರಿಗೆ ಕೂಡ ಹೋಗಿತ್ತು. ಆದರೆ, ಅವರು ಅದು ಪ್ರಾಂಕ್​ ಮಾಡಲು ಮಾಡಿದ್ದ ವಿಡಿಯೋ ಎಂದು ಭಾವಿಸಿ ಸುಮ್ಮನಾಗಿದ್ದರು. ಆದರೆ, ಯಾವಾಗ ಅದು ನಿಜವಾದ ಮದುವೆ ಎಂದು ಅವರಿಗೆ ಗೊತ್ತಾಯಿತೋ ಆಗ ಪ್ರಿನ್ಸಿಪಾಲರು ವಿದ್ಯಾರ್ಥಿಗಳಿಬ್ಬರಿಗೂ ಟಿಸಿ ಕೊಟ್ಟು ಕಳುಹಿಸಿದ್ದಾರೆ.

ನವೆಂಬರ್ 17ರಂದೇ ನಡೆದ ಈ ಮದುವೆಯ ವಿಡಿಯೋ ಸಾಕಷ್ಟು ವೈರಲ್ ಆದ ಬಳಿಕ ಈ ಹೆಚ್ಚು ಸದ್ದಾಗುತ್ತಿದೆ. ಕ್ಲಾಸ್​ ರೂಮಿನಲ್ಲಿ ಮದುವೆಯಾದ ವಿದ್ಯಾರ್ಥಿಗಳಿಗೆ ಕಾಲೇಜಿನಿಂದ ಟಿಸಿ ಕೊಟ್ಟು ಕಳುಹಿಸಲಾಗಿದೆ. ಆ ಮದುವೆಗೆ ಸಹಕರಿಸಿದ, ಮತ್ತು ಮದುವೆಗೆ ಸಾಕ್ಷಿಯಾದ ವಿದ್ಯಾರ್ಥಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಮಕ್ಕಳ ಮದುವೆಯ ವಿಚಾರ ಗೊತ್ತಾಗಿ ಅವರಿಬ್ಬರ ಪೋಷಕರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

- Advertisement -
spot_img

Latest News

error: Content is protected !!