Thursday, July 16, 2026
Homeತಾಜಾ ಸುದ್ದಿಮಂಗಳೂರು; ರಜೆ ಮಜಾ ಸವಿಯಲು ಬೀಚ್ ಗೆ ಹೋಗಿದ್ದ ವಿಟ್ಲದ ವಿದ್ಯಾರ್ಥಿನಿ ನೀರಿನಲ್ಲಿ ಮುಳುಗಿ ಸಾವು

ಮಂಗಳೂರು; ರಜೆ ಮಜಾ ಸವಿಯಲು ಬೀಚ್ ಗೆ ಹೋಗಿದ್ದ ವಿಟ್ಲದ ವಿದ್ಯಾರ್ಥಿನಿ ನೀರಿನಲ್ಲಿ ಮುಳುಗಿ ಸಾವು

- Advertisement -
- Advertisement -

ಮಂಗಳೂರು; ರಜೆ ಮಜಾ ಸವಿಯಲು ಬೀಚ್ ಗೆ ಹೋಗಿದ್ದ ವಿಟ್ಲದ ವಿದ್ಯಾರ್ಥಿನಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಘಟನೆ ಸುರತ್ಕಲ್ ಸಮೀಪದ ಚಿತ್ರಾಪುರ ಬೀಚ್ ನಲ್ಲಿ ನಡೆದಿದೆ. ನಿಶಾ ಮೃತ ವಿದ್ಯಾರ್ಥಿನಿ.

ನಿಶಾ ಮೂಲತಃ ನೇಪಾಳ ನಿವಾಸಿಯಾಗಿದ್ದು, ಪ್ರಸ್ತುತ ವಿಟ್ಲದಲ್ಲಿ ವಾಸವಾಗಿದ್ದಾಳೆ. ರಜೆ ಹಿನ್ನೆಲೆ ವಿಟ್ಲ ಮೂಲದ ದಿಗಂತ (15) ದಿವ್ಯರಾಜ್ (15) ತೇಜಸ್ (14) ಕೀರ್ತನ್ (16) ಅಶ್ಮಿತಾ (15) ನಿಶಾ (15) ಇವರೆಲ್ಲರೂ ಕುಳಾಯಿ ಚಿತ್ರಾಪುರ ಬೀಚ್ ಗೆ ತೆರಳಿದ್ದರು. ಅಲ್ಲಿ ನೀರಿನಲ್ಲಿ ಆಟ ಆಡುತ್ತಿದ್ದಾಗ ಅಲೆಯ ರಭಸಕ್ಕೆ ನೀರಿನಲ್ಲಿ ಮುಳುಗಿದ್ದಾರೆ. ಅವರಲ್ಲಿ ನಾಲ್ವರನ್ನು ಮೀನುಗಾರರು ಮತ್ತು ಸ್ಥಳೀಯರು ರಕ್ಷಿಸಿದ್ದಾರೆ. ಆದರೆ ನಿಶಾ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ.

ನಾಲ್ಕು ಜನ ಆರೋಗ್ಯವಾಗಿದ್ದು, ತೇಜಸ್ ಎಂಬ ಬಾಲಕನನ್ನು ಮುಕ್ಕ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!