Monday, May 6, 2024
Homeಕರಾವಳಿಮಗಳ ಆನ್ ಲೈನ್ ಕ್ಲಾಸ್ ಗೆ ಮಳೆಯಲ್ಲಿ ಕೊಡೆ ಹಿಡಿದು ನಿಂತ ಅಪ್ಪ : ...

ಮಗಳ ಆನ್ ಲೈನ್ ಕ್ಲಾಸ್ ಗೆ ಮಳೆಯಲ್ಲಿ ಕೊಡೆ ಹಿಡಿದು ನಿಂತ ಅಪ್ಪ : ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಸುಳ್ಯದ ವಿದ್ಯಾರ್ಥಿನಿಯ ಅಸಹಾಯಕ ಸ್ಥಿತಿಯ ಫೋಟೋ

spot_img
- Advertisement -
- Advertisement -

ಸುಳ್ಯ: ಕೊರೊನಾದಿಂದಾಗಿ ಇದೀಗ ಎಲ್ಲಾ ವಿದ್ಯಾರ್ಥಿಗಳಿಗೂ ಆನ್ ಲೈನ್ ಮೂಲಕ ತರಗತಿಗಳು ನಡೆಯುತ್ತಿರೋದು ಹೊಸ ವಿಚಾರವಲ್ಲ. ನಗರ ಪ್ರದೇಶ ಮಕ್ಕಳು ಆರಾಮವಾಗಿ ಆನ್ ಲೈನ್ ತರಗತಿಗಳನ್ನು ಅಡೆಂಟ್ ಮಾಡುತ್ತಾರೆ.ಆದ್ರೆ ಗ್ರಾಮೀಣ ಪ್ರದೇಶ ಮಕ್ಕಳ ಪಾಡು ಅದರಲ್ಲೂ ಈ ಮಳೆಗಾಲದಲ್ಲಿ ಅವರು ಯಾವ ರೀತಿ ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ, ಬಳ್ಳಕ್ಕದ ವಿದ್ಯಾರ್ಥಿನಿಯೊಬ್ಬರು ಮನೆಯಲ್ಲಿ ನೆಟ್ ವರ್ಕ್ ಸಿಗದೇ ಮಳೆಯ ನಡುವೆಯೇ ರಸ್ತೆ ಬದಿಗೆ ತಂದೆಯೊಂದಿಗೆ ಬಂದು ಆನ್ ಲೈನ್ ತರಗತಿಗೆ ಹಾಜರಾಗುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕ್ಲಾಸ್ ಕೇಳುತ್ತಿರುವ ಮಗಳಿಗೆ ಅಪ್ಪ ಕೊಡೆ ಹಿಡಿದು ಆಸರೆಯಾಗಿದ್ದಾರೆ.

ದಕ್ಷಿಣಕನ್ನಡ ಜಿಲ್ಲಯ ಸುಳ್ಯ ಹಾಗೂ ಕಡಬ ತಾಲೂಕಿನ ಹಲವಾರು ಗ್ರಾಮೀಣ ಭಾಗಗಳ ಮೊಬೈಲ್ ನೆಟ್​ವರ್ಕ್​ ಸಮಸ್ಯೆ ನಿವಾರಣೆಗೆ ಈಗಾಗಲೇ ಸಚಿವ ಎಸ್.ಅಂಗಾರ ನೇತೃತ್ವದಲ್ಲಿ ಹಲವು ಸಭೆಗಳು ನಡೆದಿದೆ. ಆದರೆ ಫಲಿತಾಂಶ ಮಾತ್ರ ಶೂನ್ಯ ಎಂಬಂತಾಗಿದೆ. ಇನ್ನು ಈ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರೋದರಿಂದ ವಿದ್ಯಾರ್ಥಿಗಳ ಪಾಡು ದೇವರಿಗೆ ಪ್ರೀತಿ ಅನ್ನೋ ಹಾಗಾಗಿದೆ. ಒಂದು ಕಡೆ ಕೈ ಕೊಡುವ ವಿದ್ಯುತ್, ಮೊಬೈಲ್ ನೆಟವರ್ಕ್ ಸಮಸ್ಯೆ ಇದೆಲ್ಲದರ ಮಧ್ಯೆ ಪಾಠ ಕೇಳೋದೇ ಸವಾಲು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಇಂತಹ ಮಕ್ಕಳ ಪರಿಸ್ಥಿತಿ ಜನಪ್ರತಿನಿಧಿಗಳಿಗೆ ಅರ್ಥವಾದರೆ ಅದೆಷ್ಟೋ ವಿದ್ಯಾರ್ಥಿಗಳು ನೆಮ್ಮದಿಯ ನಿಟ್ಟಿಸಿರು ಬಿಡುತ್ತಾರೆ.

- Advertisement -
spot_img

Latest News

error: Content is protected !!