Thursday, June 4, 2026
Homeಕರಾವಳಿಕುಕ್ಕೆ ಸುಬ್ರಮಣ್ಯದಲ್ಲಿ ಸಮಯಪ್ರಜ್ಞೆ ಮೆರೆದ ಶ್ವಾನ; ಮಗು ನಾಗರಹಾವನ್ನು ತುಳಿಯೋದನ್ನು ತಪ್ಪಿಸಿದ ಬೀದಿನಾಯಿ

ಕುಕ್ಕೆ ಸುಬ್ರಮಣ್ಯದಲ್ಲಿ ಸಮಯಪ್ರಜ್ಞೆ ಮೆರೆದ ಶ್ವಾನ; ಮಗು ನಾಗರಹಾವನ್ನು ತುಳಿಯೋದನ್ನು ತಪ್ಪಿಸಿದ ಬೀದಿನಾಯಿ

- Advertisement -
- Advertisement -

ಸುಬ್ರಮಣ್ಯ:  ಬೀದಿನಾಯಿಯೊಂದು ಸಮಯಪ್ರಜ್ಞೆ ಮೆರೆದು ಮಗು ನಾಗರಹಾವನ್ನು ತುಳಿಯೋದನ್ನು ಬೀದಿನಾಯಿಯೊಂದು ತಪ್ಪಿಸಿದ ಘಟನೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿದೆ.

ಸುಬ್ರಮಣ್ಯಕ್ಕೆ ಬಂದಿದ್ದ  ಭಕ್ತರ ತಂಡದಲ್ಲಿದ್ದ ಮಹಿಳೆಯೊಬ್ಬರು ಆದಿ ಸುಬ್ರಹ್ಮಣ್ಯ ಬಳಿ ಚಿಕ್ಕ ಮಗುವನ್ನು ರಸ್ತೆಯಲ್ಲಿ ಬಿಟ್ಟು ಪಕ್ಕದ ಅಂಗಡಿಗೆ ಹಣ್ಣುಕಾಯಿ ಖರೀದಿಸಲು ತೆರಳಿದ್ದರು. ಆಗ ಮಗು ರಸ್ತೆಯ ಬದಿಗೆ ಬಂದಿದ್ದು, ಅದೇ ಸಮಯಕ್ಕೆ ನಾಗರಹಾವೊಂದು ರಸ್ತೆ ದಾಟುತ್ತಿತ್ತು. ಮಗು ಇನ್ನೇನು ಹಾವನ್ನು ತುಳಿಯಬೇಕು ಅನ್ನುವಷ್ಟರಲ್ಲಿ ಅಲ್ಲಿಯೇ ಮಲಗಿದ್ದ ಬೀದಿ ನಾಯಿ ಓಡಿ ಹೋಗಿ ಮಗುವಿಗೆ ಅಡ್ಡ ನಿಂತು ಹಾವನ್ನು ತುಳಿಯದಂತೆ ಹಾಗೂ ಹಾವು ತೆರಳಲು ಅವಕಾಶ ನೀಡಿ ಮಗುವನ್ನು ರಕ್ಷಿಸಿದೆ. ಘಟನೆಯನ್ನು ನೋಡಿದ ಪ್ರತ್ಯಕ್ಷದರ್ಶಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!