Thursday, June 4, 2026
Homeಕರಾವಳಿಉಡುಪಿಮಂಗಳೂರು: ಕೋಡಿಕಲ್ ನಲ್ಲಿ ಕಿಡಿಗೇಡಿಗಳಿಂದ ಖಾಸಗಿ ಬಸ್ ಗೆ ಕಲ್ಲು ತೂರಾಟ...!

ಮಂಗಳೂರು: ಕೋಡಿಕಲ್ ನಲ್ಲಿ ಕಿಡಿಗೇಡಿಗಳಿಂದ ಖಾಸಗಿ ಬಸ್ ಗೆ ಕಲ್ಲು ತೂರಾಟ…!

- Advertisement -
- Advertisement -

ಮಂಗಳೂರು: ಖಾಸಗಿ ಬಸ್ ಗೆ ಕಲ್ಲು ತೂರಾಟ ನಡೆಸಿದ ಘಟನೆ ಮಂಗಳೂರು ನಗರದ ಕೋಡಿಕಲ್ ಬಳಿ ನಡೆದಿದೆ. ಟೈಮಿಂಗ್ ವಿಚಾರದಲ್ಲಿ ಎರಡು ಬಸ್ ಗಳ ಸಿಬ್ಬಂದಿ ಮಧ್ಯೆ ಮಾತಿನ ಚಕಮಕಿ ನಡೆದಿದ್ದು ಇದೇ ವೇಳೆ ಎಟಿಎಂಎಸ್ ಖಾಸಗಿ ಬಸ್ಸಿಗೆ ಕಲ್ಲು ತೂರಾಟ ನಡೆಸಲಾಗಿದೆ.

ಕಲ್ಲು ತೂರಾಟದಿಂದ ಬಸ್ಸಿನ ಗಾಜು ಪುಡಿ ಪುಡಿಯಾಗಿದೆ ಕಿಡಿಗೇಡಿಗಳು ಚಕ್ರ ವಾಹನದ ನಂಬರ್ ಪ್ಲೇಟ್ ಕಾಣದಂತೆ ಮರೆಮಾಚಿದ್ದಾರೆ. ಕಳೆದ ಶನಿವಾರದಂದು ಖಾಸಗಿ ಬಸ್ ಮೇಲೆ ಕಲ್ಲು ತೂರಾಟ ಮಾಡಲಾಗಿತ್ತು. ಈ ಪರಿಸರದಲ್ಲಿ ಎರಡನೇ ಬಾರಿ ನಡೆದ ಘಟನೆಯಾಗಿದೆ.

ಹೀಗಾಗಿ ಸ್ಥಳದಲ್ಲಿ ಕೆಲ ಸಮಯ ಉದ್ವಿಗ್ನ ವಾತಾವರಣ ಉಂಟಾಯಿತು. ಕೋಡಿಕಲ್ ಪರಿಸರದ ನಾಗಬನಕ್ಕೆ ಹಾನಿ ಎಸಗಿದ ದುಷ್ಕೃತ್ಯವನ್ನು ಖಂಡಿಸಿ ಇಂದು ವಿಶ್ವ ಹಿಂದೂ ಪರಿಷತ್-ಬಜರಂಗ ದಳದ ವತಿಯಿಂದ ಕೋಡಿಕಲ್‌ ನಲ್ಲಿ ಪ್ರತಿಭಟನೆ ನಡೆದಿದ್ದು ಅಲ್ಲದೆ ಬಂದ್ ಮಾಡಲಾಗಿದೆ.

- Advertisement -

Latest News

error: Content is protected !!