Saturday, April 20, 2024
Homeತಾಜಾ ಸುದ್ದಿಯುವತಿಯ ಮೇಲೆ ಆಸಿಡ್ ಹಾಕಿದ ಪ್ರಕರಣ :  ಆರೋಪಿ ನಾಗೇಶ್ ಪತ್ತೆಗಾಗಿ 15 ಸಾವಿರಕ್ಕೂ ಹೆಚ್ಚು...

ಯುವತಿಯ ಮೇಲೆ ಆಸಿಡ್ ಹಾಕಿದ ಪ್ರಕರಣ :  ಆರೋಪಿ ನಾಗೇಶ್ ಪತ್ತೆಗಾಗಿ 15 ಸಾವಿರಕ್ಕೂ ಹೆಚ್ಚು ಲಾಡ್ಜ್ ಗಳಲ್ಲಿ ಹುಡುಕಾಡಿದ ಪೊಲೀಸರು

spot_img
- Advertisement -
- Advertisement -

ಬೆಂಗಳೂರು : ಕಾಮಾಕ್ಷಿಪಾಳ್ಯದಲ್ಲಿ ಯುವತಿ ಮೇಲೆ ಆಸಿಡ್ ಎರಚಿ ಪೈಶಾಚಿಕ ಕೃತ್ಯ ಮೆರೆದಿದ್ದ ನಾಗೇಶ ಪೊಲೀಸರಿಗೆ ಇನ್ನೂ ಸಿಗದೇ ತಲೆಮರೆಸಿಕೊಂಡಿದ್ದಾನೆ. ಸೂಪರ್ ಕಾಪ್‌ಗಳು ಎಂದು ಕರೆಸಿಕೊಳ್ಳುವ ಕರ್ನಾಟಕ ಪೊಲೀಸರಿಗೆ ಚಳ್ಳೆಹಣ್ಣು ತಿನಿಸುತ್ತಿರುವ ನಾಗೇಶ ಯಾವುದೇ ಸುಳಿವನ್ನು ಬಿಟ್ಟುಕೊಟ್ಟಿಲ್ಲ ಎಂದು ಪೊಲೀಸರೇ ಒಪ್ಪಿಕೊಳ್ಳುತ್ತಿದ್ದಾರೆ.

ಏಪ್ರಿಲ್ 28 ರ ಬೆಳಗ್ಗೆ 8.30ಕ್ಕೆ ಘಟನೆ ನಡೆದಾಗಿನಿಂದ  ಆರೋಪಿ ನಾಗೇಶ್ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಲೇ ಇದ್ದಾರೆ. , ರಾಜ್ಯ ಹೊರ ರಾಜ್ಯಗಳಲ್ಲಿ ತೀವ್ರ ಹುಡುಕಾಟ ನಡೆಸ್ತಿದ್ದಾರೆ. ಅತೀವ ದೈವ ಭಕ್ತನಾಗಿದ್ದ ಪರಮ ಪಾಪಿ ನಾಗೇಶ. ಧರ್ಮಸ್ಥಳ ಮತ್ತು ತಿರುಪತಿಗೆ ನಿರಂತರವಾಗಿ ಹೋಗಿ ಬರ್ತಿದ್ದ. ಅಲ್ಲೇ ಅಡಗಿ ಕುಳಿತಿರಬಹುದು ಎಂದು ಶಂಕಿಸಿದ್ದ ಪೊಲೀಸರು. ತಿರುಪತಿ ಸುತ್ತಮುತ್ತಲಿದ್ದ 4 ಸಾವಿರ ಲಾಡ್ಜ್ ಗಳ‌ ಶೋಧ ನಡೆಸಿದ್ದಾರೆ. ಧರ್ಮಸ್ಥಳದಲ್ಲಿ ಒಂದೇ ಒಂದು ಲಾಡ್ಜ್ ಕೂಡ ಬಿಡದೆ ಹುಡುಕಾಟ ನಡೆಸಿದ್ದಾರೆ. ‌ಕೊಯಮುತ್ತೂರಿನ ಈಶಾ ಫೌಂಡೇಶನ್‌ನಲ್ಲಿಯೂ ತಡಕಾಡಿದ್ದಾರೆ‌. ಆದರೆ ಯಾವುದೇ ಪ್ರಯೋಜನವಾಗಿಲ್ಲ.ಆತನ ಒಂದೇ ಒಂದು ಸುಳಿವು ಕೂಡ ಸಿಗ್ತಾ ಇಲ್ಲ. ಕೇದಾರನಾಥ ಸೇರಿದಂತೆ ಪವಿತ್ರ ಕ್ಷೇತ್ರಗಳತ್ತ ಕಣ್ಣು ಹಾಯಿಸಿರುವ ಖಾಕಿ ಅಲ್ಲಿಯು ತಂಡ ಕಳುಹಿಸಿ ಹುಡುಕಾಟ ನಡೆಸ್ತಿದ್ದಾರೆ.

ಕುಟುಂಬ ಅನ್ನೋ ಸೆಂಟಿಮೆಂಟ್ ಇಲ್ಲದ ನಾಗೇಶ ಮೊಬೈಲ್, ಎಟಿಎಂ, ಯಾವುದನ್ನು ಬಳಸ್ತಿಲ್ಲ. ಸ್ನೇಹಿತರು ಕುಟುಂಬಸ್ಥರು ಯಾರ ಸಂಪರ್ಕ ಕೂಡ ಮಾಡ್ತಿಲ್ಲ. ಯಾರಾದರು ಒಬ್ಬರ ಸಂಪರ್ಕಕ್ಕೆ ಬರುವರೆಗೂ ಆತನ ಪತ್ತೆ ಕಷ್ಟವಾಗಿದ್ದು. ಶಂಕೆ ಮೇಲಷ್ಟೇ ಶೋಧ ನಡೆಸಲಾಗ್ತಿದೆ. ಇನ್ನೂ ಕೇಸ್ ಸಂಬಂಧ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಆರೋಪಿ ಪತ್ತೆಗೆ ಬಹಳ ಪ್ರಯತ್ನ ನಡೀತಿದೆ.ಆರೋಪಿ‌ ಪ್ಲಾನ್ ಮಾಡಿಕೊಂಡು ಕೃತ್ಯ ಎಸಗಿದ್ದರಿಂದ ಪತ್ತೆ ಮಾಡೋದು ಕಷ್ಟವಾಗ್ತಿದೆ. ಆದರೆ ಆತ ಬಹಳ ಸಮಯ ತಪ್ಪಿಸಿಕೊಳ್ಳಲು ಆಗಲ್ಲ, ಸಿಕ್ಕೇ ಸಿಗುತ್ತಾನೆ ಎಂದಿದ್ದಾರೆ.

- Advertisement -
spot_img

Latest News

error: Content is protected !!