Friday, June 5, 2026
Homeತಾಜಾ ಸುದ್ದಿಮಂಗಳೂರು: ಬಿಲ್ಲವರು ನಾರಾಯಣ ಗುರುಗಳ ಅನುಯಾಯಿಗಳು: ಅವರು ತಪ್ಪಿಯೂ ಕಾಂಗ್ರೆಸ್ ಗೆ ಮತ ಹಾಕೋದಿಲ್ಲ: ಬಿಜೆಪಿ...

ಮಂಗಳೂರು: ಬಿಲ್ಲವರು ನಾರಾಯಣ ಗುರುಗಳ ಅನುಯಾಯಿಗಳು: ಅವರು ತಪ್ಪಿಯೂ ಕಾಂಗ್ರೆಸ್ ಗೆ ಮತ ಹಾಕೋದಿಲ್ಲ: ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಹೇಳಿಕೆ

- Advertisement -
- Advertisement -

ಮಂಗಳೂರು: ಬಿಲ್ಲವರು ರಾಷ್ಟ್ರಪ್ರೇಮಿಗಳು, ರಾಷ್ಟ್ರೀಯವಾದಿಗಳು, ಜಾತಿವಾದಿಗಳಲ್ಲ. ಅವರು ಅಪ್ಪಟ ನಾರಾಯಣ ಗುರುಗಳ ಅನುಯಾಯಿಗಳು‌. ಆದ್ದರಿಂದ ಅವರು ತಪ್ಪಿಯೂ ಕಾಂಗ್ರೆಸ್ ಗೆ ಓಟ್ ಹಾಕೋದಿಲ್ಲ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಹೇಳಿದರು.

ನಗರದ ಕೊಡಿಯಾಲಬೈಲ್ ನಲ್ಲಿರುವ ಅಟಲ್ ಸೇವಾ ಕೇಂದ್ರದಲ್ಲಿ ಮಾತನಾಡಿದ ಅವರು, ದ.ಕ.ಜಿಲ್ಲೆಯ ಕಾಂಗ್ರೆಸ್ ನಲ್ಲಿ ನಾರಾಯಣ ಗುರುಗಳ ಅನುಯಾಯಿ ಜನಾರ್ದನ ಪೂಜಾರಿ ಓರ್ವರೇ ಇರೋದು. ಬೇರೆಯವರು ಕಾಂಗ್ರೆಸ್ ನ ಅನುಯಾಯಿಗಳಷ್ಟೇ. ಇದೊಂದು 2023ರ ಚುನಾವಣೆ ಎದುರಿಸಲು ಮಾಡುತ್ತಿರುವ ಷಡ್ಯಂತರದ ಭಾಗ. ಕರಾವಳಿಯಲ್ಲಿ ಅತ್ಯಂತ ಪ್ರಬಲ ಸಮುದಾಯವಾದ ಬಿಲ್ಲವ ಯುವಕರು ಅತೀ ಹೆಚ್ಚು ಸಂಖ್ಯೆಯಲ್ಲಿ ಬಿಜೆಪಿಯಲ್ಲಿದ್ದಾರೆ. ಆದ್ದರಿಂದ ಅವರನ್ನು ಯೂಟರ್ನ್ ಮಾಡಲು ಈ ರೀತಿ ಮಾಡಲಾಗುತ್ತಿದೆ. ಆದರೆ ಈ ಜನ್ಮದಲ್ಲಿ ಬಿಲ್ಲವರನ್ನು ಕಾಂಗ್ರೆಸ್ ಗೆ ಸೆಳೆಯಲು ಸಾಧ್ಯವಿಲ್ಲ. ಬಿಲ್ಲವರು ತಪ್ಪಿಯೂ ಕಾಂಗ್ರೆಸ್ ಗೆ ಓಟ್ ಹಾಕೋದಿಲ್ಲ. ಹಿಜಾಬ್ ಬೇಕು ಕಿತಾಬ್ ಬೇಡ ಎಂದು ಹೇಳುವ ಕಾಂಗ್ರೆಸ್ ಗರಿಗೆ ಬಿಲ್ಲವರು ಮತದಾನ ಮಾಡೋದಿಲ್ಲ ಎಂದರು‌.

- Advertisement -

Latest News

error: Content is protected !!