Saturday, May 18, 2024
Homeಕರಾವಳಿಮಂಗಳೂರು: ರಾಜ್ಯ ಮತ್ತು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ !

ಮಂಗಳೂರು: ರಾಜ್ಯ ಮತ್ತು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ !

spot_img
- Advertisement -
- Advertisement -

ಮಂಗಳೂರು: ತಾಲ್ಲೂಕಿನ ಕಟ್ಟದಬೈಲು ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಡ್ವರ್ಡ್ ಡಿಸೋಜ ಅವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ. 1992ರಲ್ಲಿ ಸರಳೀಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯಿಂದ ವೃತ್ತಿ ಜೀವನ ಆರಂಭಿಸಿದ ಅವರು, 2003ರಿಂದ ಕಟ್ಟದಬೈಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ.

ಇನ್ನು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಒಟ್ಟು 21 ಮಂದಿ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.

ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಚೇತನಾ ಕುಮಾರಿ ಪಿ.ವಿ. (ಕುದ್ರಬೆಟ್ಟು-ಬಂಟ್ವಾಳ), ಪಿ. ಶಿವಾನಂದ ಭಂಡಾರಿ (ಬೊಳ್ಳುಕಲ್ಲು-ಬೆಳ್ತಂಗಡಿ), ಸುರೇಖಾ ಕೆ. (ಬಸ್ತಿ ಗಾರ್ಡನ್‌-ಮಂಗಳೂರು ಉತ್ತರ), ಪ್ರತಿಮಾ ಹೆಬ್ಬಾರ (ಬಗಂಬಿಲ- ಮಂಗಳೂರು ದಕ್ಷಿಣ), ಅರ್ಚನಾ (ಪೆಂಚಾರು-ಮೂಡುಬಿದಿರೆ), ಶಾಂತಕುಮಾರಿ (ಚೆನ್ನಾವರ-ಪುತ್ತೂರು), ಶ್ವೇತಾ ಕೆ. (ಅಚ್ರಪ್ಪಾಡಿ-ಸುಳ್ಯ).

ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸುಚೇತಾ (ಕೆದಿಲ-ಬಂಟ್ವಾಳ), ಅಮಿತಾನಂದ ಹೆಗ್ಡೆ (ಬಂಗಾಡಿ-ಬೆಳ್ತಂಗಡಿ), ಪಾವನಾ ಕೆ. (ಕಾಪಿಕಾಡು- ಮಂಗಳೂರು ಉತ್ತರ), ಸುರೇಶ್‌ ರಾವ್‌ (ನಾಲ್ಯಪದವು- ಮಂಗಳೂರು ದಕ್ಷಿಣ), ರಾಜೀವ್‌ ಶೆಟ್ಟಿ (ಅಳಿಯೂರು-ಮೂಡುಬಿದಿರೆ), ಶೀನಪ್ಪ ನಾಯ್ಕ್‌ ಎನ್‌. (ಗೋಳಿತೊಟ್ಟು-ಪುತ್ತೂರು), ಸುನಂದಾ ಜಿ. (ಪೇರಾಲು-ಸುಳ್ಯ).

ಪ್ರೌಢಶಾಲಾ ವಿಭಾಗದಲ್ಲಿ ವೆಂಕಟರಮಣ ಆಚಾರ್ಯ (ಸಜಿಪಮೂಡ- ಬಂಟ್ವಾಳ), ಅಜಿತ್‌ಕುಮಾರ್ (ಗೇರುಕಟ್ಟೆ- ಬೆಳ್ತಂಗಡಿ), ಸುಂದರ್‌ (ನಡುಗೋಡು-ಮಂಗಳೂರು ಉತ್ತರ), ಎವರೆಸ್ಟ್‌ ಫೆಲಿಕ್ಸ್‌ ಕ್ರಾಸ್ತಾ (ಜೆಪ್ಪು-ಮಂಗಳೂರು ದಕ್ಷಿಣ), ಶಂಕರ ನಾಯ್ಕ್‌ (ಕಲ್ಲಮಂಡ್ಕೂರು-ಮೂಡುಬಿದಿರೆ), ಗೀತಾಮಣಿ ಎಸ್‌. (ಕೊಂಬೆಟ್ಟು- ಪುತ್ತೂರು), ಕೆಂಚವೀರಪ್ಪ (ಮರ್ಕಂಜ-ಸುಳ್ಯ).

- Advertisement -
spot_img

Latest News

error: Content is protected !!