Friday, June 5, 2026
Homeಅಪರಾಧಮಂಗಳೂರು: ದುಷ್ಕರ್ಮಿಗಳ ತಂಡದಿಂದ ವ್ಯಕ್ತಿಯೊಬ್ಬನಿಗೆ ಚೂರಿ ಇರಿತ!

ಮಂಗಳೂರು: ದುಷ್ಕರ್ಮಿಗಳ ತಂಡದಿಂದ ವ್ಯಕ್ತಿಯೊಬ್ಬನಿಗೆ ಚೂರಿ ಇರಿತ!

- Advertisement -
- Advertisement -

ಮಂಗಳೂರು: ವ್ಯಕ್ತಿಯೊಬ್ಬರಿಗೆ ದುಷ್ಕರ್ಮಿಗಳ ತಂಡವೊಂದು ಬೆನ್ನಿಗೆ ಚೂರಿ ಇರಿದು ಪರಾರಿಯಾದ ಘಟನೆ ನಗರದ ಮಾಲೆಮಾರ್ ಬಳಿ ಬುಧವಾರ ನಡೆದಿದೆ.

ಪಂಜಿಮೊಗರು ನಿವಾಸಿ ರಾಜೇಶ್ (45) ಹಲ್ಲೆಗೊಳಗಾದ ವ್ಯಕ್ತಿ. ಪ್ರತಿದಿನದಂತೆ ರಾಜೇಶ್ ತನ್ನ ಕೆಲಸ ಮುಗಿಸಿ ಕೊಟ್ಟಾರದಿಂದ ಹೋಗುತ್ತಿದ್ದಾಗ ಮಾಲೆಮಾರ್ ಬಳಿ ದುಷ್ಕರ್ಮಿಗಳ ತಂಡ ಬೆನ್ನಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ.

ಗಾಯಗೊಂಡ ರಾಜೇಶ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.ಕಾವೂರು ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

- Advertisement -

Latest News

error: Content is protected !!