Saturday, June 6, 2026
Homeಕರಾವಳಿಕಡಬ: ಯುವಕನಿಗೆ ಚಾಕು ಇರಿತ ಪ್ರಕರಣ: ಆರೋಪಿಯ ಬಂಧನ

ಕಡಬ: ಯುವಕನಿಗೆ ಚಾಕು ಇರಿತ ಪ್ರಕರಣ: ಆರೋಪಿಯ ಬಂಧನ

- Advertisement -
- Advertisement -

ಕಡಬ,: ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ನೌಫಲ್(29) ಬಂಧಿತ ಆರೋಪಿ.

ಸುಮಾರು ಆರು ತಿಂಗಳ ಹಿಂದೆ ಉಪ್ಪಿನಂಗಡಿಯಲ್ಲಿ ಮೀನು ವ್ಯಾಪಾರ ವಿಚಾರವಾಗಿ ನಡೆದ ಗಲಾಟೆ ಬಗ್ಗೆ ನೌಫಲ್ ನ ಸಹೋದರನ ಮಾಹಿತಿಯನ್ನು ನವಾಝ್ ಪೊಲೀಸರಿಗೆ ನೀಡಿದ್ದಾನೆ ಎಂದು ಆರೋಪಿಸಿ ಈ ಕೃತ್ಯ ಎಸಗಲಾಗಿದೆ ಎಂದು ದೂರಲಾಗಿದೆ. ಸೋಮವಾರ ಸಂಜೆ ಮಾತನಾಡಲಿಕ್ಕಿದೆ ಎಂದು ನವಾಝ್ ರನ್ನು ಆರೋಪಿ ನೌಫಲ್ ತನ್ನ ಅಂಗಡಿಗೆ ಕರೆಸಿ ಹೊಟ್ಟೆಗೆ ಚೂರಿಯಿಂದ ಇರಿದಿದ್ದಾನೆ ಎಂದು ನವಾಝ್ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಗಾಯಾಳು ನವಾಝ್ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಬಗ್ಗೆ ಕಡಬ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!