Saturday, June 6, 2026
Homeತಾಜಾ ಸುದ್ದಿಎಸ್ಸೆಸೆಲ್ಸಿ ಫೇಲಾದ ವಿದ್ಯಾರ್ಥಿಗಳಿಗೆ ಪೂರಕ ವರೀಕ್ಷೆಗೆ ಅರ್ಜಿ ಸಲ್ಲಿಸಲು ಮೇ 15ರವರೆಗೆ ಅವಕಾಶ

ಎಸ್ಸೆಸೆಲ್ಸಿ ಫೇಲಾದ ವಿದ್ಯಾರ್ಥಿಗಳಿಗೆ ಪೂರಕ ವರೀಕ್ಷೆಗೆ ಅರ್ಜಿ ಸಲ್ಲಿಸಲು ಮೇ 15ರವರೆಗೆ ಅವಕಾಶ

- Advertisement -
- Advertisement -

ಬೆಂಗಳೂರು : ನಿನ್ನೆಯಷ್ಟೇ ಎಸ್ಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗಳ ಸ್ಕ್ಯಾನ್ ಕಾಪಿ ಪಡೆಯಲು ಆನ್ ಲೈನ್ ಮೂಲಕ ಮೇ. 14 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನುಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮೇ.15 ರವರೆಗೆ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಮರು ಎಣಿಕೆ ಮತ್ತು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವವರು ಫೋಟೋ ಕಾಪಿಯನ್ನು ಪಡೆಯಬೇಕು. ನಂತರವಷ್ಟೇ ಮರು ಎಣಿಕೆ ಮತ್ತು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬೇಕು. ಮರು ಎಣಿಕೆ ಉಚಿತವಾಗಿರುತ್ತದೆ.

ಪ್ರತಿ ವಿಷಯದ ಸ್ಕ್ಯಾನ್ ಪ್ರತಿ ಪಡೆಯಲು 410 ರೂ. ಮತ್ತು ಮರು ಮೌಲ್ಯಮಾಪನಕ್ಕೆ 810 ರೂ. ನಿಗದಿ ಮಾಡಲಾಗಿದೆ. ಪೂರಕ ಪರೀಕ್ಷೆಗೆ ಒಂದು ವಿಷಯಕ್ಕೆ 370 ರೂ. 2 ವಿಷಯಕ್ಕೆ 461 ರೂ. ಮತ್ತು ಮೂರಕ್ಕಿಂತ ಹೆಚ್ಚಿನ ವಿಷಯಗಳಿಗೆ 620 ರೂ.ಗಳನ್ನು ನಿಗದಿಮಾಡಲಾಗಿದೆ.

- Advertisement -

Latest News

error: Content is protected !!