Saturday, December 14, 2024
Homeಆರಾಧನಾಶ್ರೀರಾಮ ನವಮಿ ನಂತರ ಕಡಿಮೆಯಾಗಲಿದೆಯೇ ಕೊರೊನಾ ವೈರಸ್‌?

ಶ್ರೀರಾಮ ನವಮಿ ನಂತರ ಕಡಿಮೆಯಾಗಲಿದೆಯೇ ಕೊರೊನಾ ವೈರಸ್‌?

spot_img
- Advertisement -
- Advertisement -

ಭಾರತದಲ್ಲಿ ಈವರೆಗೆ 1500ಕ್ಕೂ ಹೆಚ್ಚು ಮಂದಿ ಕೊರೋನಾ ವೈರಸ್‌ ಸೋಂಕಿಗೆ ಒಳಗಾಗಿದ್ದಾರೆ. ಭಾರತ ಉಷ್ಣವಲಯದ ದೇಶ. ಚೀನಾ ಆಗಲೀ, ಇಟಲಿ ಆಗಲೀ ಶೀತ ವಲಯದಲ್ಲಿರುವ ದೇಶಗಳು. ಅಲ್ಲಿನ ತಾಪಮಾನ ಸದಾ ಕಾಲ 20 ಡಿಗ್ರಿ ಸೆಂಟಿಗ್ರೇಡ್‌ಗಿಂತ ಕೆಳಗೇ ಇರುತ್ತದೆ. ಅಮೆರಿಕವೂ ಅಷ್ಟೇ. ಆದರೆ ಉಷ್ಣವಲಯದ ದೇಶಗಳಾದ ಅರಬ್‌ ದೇಶಗಳು, ಭಾರತ, ಆಫ್ರಿಕದ ದೇಶಗಳು, ದಕ್ಷಿಣ ಅಮೆರಿಕದ ದೇಶಗಳು ಇನ್ನೂ ಅಷ್ಟೊಂದು ಸಾವು ನೋವು ದಾಖಲಿಸಿಲ್ಲ. ಇದಕ್ಕೆ ಕಾರಣ, ಅಲ್ಲಿಗೆ ಇನ್ನೂ ಸೋಂಕು ಸಾಕಷ್ಟು ಹರಡಿಲ್ಲ ಎನ್ನುವುದಕ್ಕಿಂತಲೂ ಬಿಸಿಲು ನಾಡಿನಲ್ಲಿ ವೈರಸ್‌ ಹೆಚ್ಚು ಕಾಲ ಬದುಕುವುದಿಲ್ಲ ಎನ್ನುವುದೇ ಕಾರಣ ಆಗಿರಬಹುದು.


ಈಗಾಗಲೇ ನಮ್ಮ ದೇಶದಲ್ಲಿ ಬಿಸಿಲು ಬಾರಿಸುತ್ತಿದೆ. ಕಲಬುರಗಿ ಮುಂತಾದ ಕಡೆ ಹೊರಗೆ ಹೋದರೆ ಬಿಸಿಲಿನಲ್ಲೇ ಸಾಯುವ ಭಯ. ಇಂಥ ಬಿಸಿಲಿನಲ್ಲಿ, ತಾಪಮಾನದಲ್ಲಿ ವೈರಸ್‌ ಹೆಚ್ಚು ಕಾಲ ಬದುಕಿ ಉಳಿಯುವುದಿಲ್ಲ ಹಾಗೂ ವರ್ಧಿಸಲು ಅಗತ್ಯವಾದ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಇದೊಂದು ಭರವಸೆಯ ವಿದ್ಯಮಾನ.

ಶ್ರೀರಾಮ ನವಮಿಯ ಬಳಿಕ ನಮ್ಮ ದೇಶದಲ್ಲಿ ಬಿಸಿಲು ಹೆಚ್ಚಾಗುತ್ತದೆ. ಇಲ್ಲಿ ನವಮಿಯಂದು ಪಾನಕ ಪನಿವಾರ ಮಾಡಿ ಹಂಚುವುದು, ಈ ಉಷ್ಣತೆಯ ಉಗ್ರ ಪ್ರತಾಪವನ್ನು ಸಹಿಸಿಕೊಳ್ಳುವುದಕ್ಕಾಗಿಯೇ ಆಗಿದೆ. ಸದ್ಯ ನಾವು ಬಿಸಿಲನ್ನು ಸಹಿಸಿಕೊಳ್ಳೋಣ, ಆದರೆ ವೈರಸ್ಸನ್ನು ಈ ಬಿಸಿಲು ಕೊಂದು ಹಾಕಲಿದೆ.

ವಿಜ್ಞಾನಿಗಳು ಹೇಳುತ್ತಿರುವ ಇನ್ನೊಂದು ವಿಚಾರ ಎಂದರೆ ರೋಗ ನಿರೋಧಕ ಶಕ್ತಿಯದ್ದು. ಉಷ್ಣವಲಯದ ದೇಶಗಳು, ಅದರಲ್ಲೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಜನತೆಗೆ ರೋಗ ನಿರೋಧಕ ಶಕ್ತಿ ಹೆಚ್ಚು. ಉದಾಹರಣೆಗೆ, ಉಷ್ಣವಲಯದಲ್ಲಿ ರೋಗಕಾರಕ ಬ್ಯಾಕ್ಟೀರಿಯಾ, ವೈರಸ್‌ಗಳು ಅಧಿಕ. ಆದರೆ ಅವು ಇಲ್ಲಿ ಹಾವಳಿ ಮಾಡುವುದಕ್ಕಿಂತಲೂ ಶೀತ ವಲಯದ ದೇಶಗಳಲ್ಲೇ ಹಾವಳಿ ಮಾಡುವುದು ಹೆಚ್ಚು.

ಇನ್ನೊಂದು ವಿಚಾರ ಎಂದರೆ ನಮ್ಮಲ್ಲಿರುವ ಯುವಜನತೆ ಹಾಗೂ ವಯಸ್ಕರ ಪ್ರಮಾಣ. ಈ ರೋಗ ಹೆಚ್ಚಾಗಿ ಅರುವತ್ತಕ್ಕೂ ಹೆಚ್ಚು ವಯಸ್ಸಾದವರು ಮತ್ತು ಕ್ಯಾನ್ಸರ್, ಹೃದಯರೋಗ, ಮಧುಮೇಹ ಮುಂತಾದ ಆರೋಗ್ಯ ಸಮಸ್ಯೆ ಇರುವವರನ್ನು ಕಾಡುವುದು ಹೆಚ್ಚು. ಯುವಜನತೆಯನ್ನು ಬಾಧಿಸುವುದು ಕಡಿಮೆ. ಭಾರತ ಯುವಜನರ ದೇಶ. ಇಲ್ಲಿ ವೃದ್ಧರು ಕಡಿಮೆ. ಹೀಗಾಗಿ ವೈರಸ್‌ಗೆ ಇಲ್ಲಿ ಅವಕಾಶವಿಲ್ಲ.

- Advertisement -
spot_img

Latest News

error: Content is protected !!