Saturday, June 6, 2026
Homeಕರಾವಳಿಕಾಂಗ್ರೆಸ್ ನಾಯಕರಾಗಿದ್ದ ಶ್ರೀನಿವಾಸ ವಿ ಕಿಣಿ ಮತ್ತು ಪ್ರಮೋದ್ ಕುಮಾರ್ ರೈ ಎಂತಿಮಾರ್ ಬಿಜೆಪಿ ಸೇರ್ಪಡೆ

ಕಾಂಗ್ರೆಸ್ ನಾಯಕರಾಗಿದ್ದ ಶ್ರೀನಿವಾಸ ವಿ ಕಿಣಿ ಮತ್ತು ಪ್ರಮೋದ್ ಕುಮಾರ್ ರೈ ಎಂತಿಮಾರ್ ಬಿಜೆಪಿ ಸೇರ್ಪಡೆ

- Advertisement -
- Advertisement -

ಬಂಟ್ವಾಳ: ಭಾರತೀಯ ಜನತಾ ಪಾರ್ಟಿಯ ತತ್ವ ಮತ್ತು ಸಿದ್ದಂತಗಳನ್ನು ಒಪ್ಪಿ ಹಾಗೂ ನರೇಂದ್ರ ಮೋದಿಜಿ ಮತ್ತು ಬಿ.ಎಸ್ .ಯಡಿಯೂರಪ್ಪರವರ ಜನಪರ ಆಡಳಿತ ಹಾಗೂ ಶಾಸಕ ಹರೀಶ್ ಪೂಂಜ ಇವರ ಅಬಿವೃದ್ಧಿ ಕಾರ್ಯ ಮೆಚ್ಚಿ ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ಏನ್ ಶ್ರೀನಿವಾಸ ವಿ ಕಿಣಿ ನಾರಾವಿ ಹಾಗೂ ತಾಲೂಕು ಕಾಂಗ್ರೆಸ್ ಕಿಸಾನ್ ಗ್ರಾಮೀಣ ಘಟಕದ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಎಂತಿಮಾರ್ ರೆಖ್ಯಾ ಇಂದು ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.

ಬಂಟ್ವಾಳ ಬಂಟರ ಭವನದಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯ ಕಾರಿಣಿಯಲ್ಲಿ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆಯವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹಾಗೂ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

- Advertisement -

Latest News

error: Content is protected !!