Sunday, June 7, 2026
Homeತಾಜಾ ಸುದ್ದಿಮಂಗಳೂರು: ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಪೊಲೀಸರ ವಶ

ಮಂಗಳೂರು: ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಪೊಲೀಸರ ವಶ

- Advertisement -
- Advertisement -

ಮಂಗಳೂರು: ನಿರ್ಬಂಧದ ನಡುವೆಯೂ ಮಂಗಳೂರಿಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗಮಿಸಿದ್ದು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಮೋದ್ ಮುತಾಲಿಕ್ ಪ್ರಚೋದನಕಾರಿ ಮಾತುಗಳನ್ನಾಡುವ ಮೂಲಕ ಕೋಮು ಭಾವನೆ ಕೆರಳಿಸಬಹುದು ಎಂದು ದಕ ಜಿಲ್ಲಾಧಿಕಾರಿ, ಮುತಾಲಿಕ್ ರ ಪ್ರವೇಶಕ್ಕೆ ನಿರ್ಬಂಧ ಹೇರಿದ್ರು. ಆದ್ರೂ ಇಂದು ಪ್ರಮೋದ್ ಮುತಾಲಿಕ್ ಮಂಗಳೂರಿಗೆ ಆಗಮಿಸಿದ್ದು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಮಾತನಾಡಿದ ಪೊಲೀಸ್ ಕಮಿಷನರ್ ಶಶಿಕುಮಾರ್, ಮುತಾಲಿಕ್ ಅವರು ಪ್ರವೀಣ್ ಮನೆಗೆ ಹೋಗುವ ಉದ್ದೇಶ ಹೊಂದಿದ್ರು. ಇದರ ಮಾಹಿತಿ ದೊರೆತ ಕಾರಣ ಅವರ ಪ್ರವೇಶಕ್ಕೆ ನಿರ್ಬಂಧ ಹಾಕಿದ್ವಿ. ಆದ್ರೆ ಅವ್ರು ಇಂದು ಬೆಳಗ್ಗೆ ಉಡುಪಿಗೆ ಬಂದ ಮಾಹಿತಿ ಸಿಕ್ಕಿತು. ಕಮಿಷನರೇಟ್ ವ್ಯಾಪ್ತಿಗೆ ಬಂದ ಕೂಡಲೇ ಅವರನ್ನು ಹೆಜಮಾಡಿ ಚೆಕ್ ಪೋಸ್ಟ್ ಬಳಿ ವಶಕ್ಕೆ ಪಡೆದಿದ್ದೇವೆ ಎಂದರು.

- Advertisement -

Latest News

error: Content is protected !!