Tuesday, June 9, 2026
Homeಕರಾವಳಿಉಡುಪಿಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ನೀಲಾವರ ಸುರೇಂದ್ರ ಅಡಿಗ ಇವರ...

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ನೀಲಾವರ ಸುರೇಂದ್ರ ಅಡಿಗ ಇವರ ಪದಗ್ರಹಣ ಸಮಾರಂಭ

- Advertisement -
- Advertisement -

ಇಂದು ಉಡುಪಿಯ ಜಿ.ಶಂಕರ ಸರ್ಕಾರೀ ಮಹಿಳಾ ಪದವಿ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರಸ್ತುತ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ನೀಲಾವರ ಸುರೇಂದ್ರ ಅಡಿಗರ ಪದಗ್ರಹಣ ಸಮಾರಂಭ ನೆರವೇರಿತು.

ಹಾಗೇ ರಾಜ್ಯದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ . ಮಹೇಶ್ ಜೋಶಿಯವರಿಗೆ ಜಿಲ್ಲಾವತಿಯ ಅಭಿನಂದನಾ ಕಾರ್ಯಕ್ರಮವೂ ನಡೆಯಿತು.

ನಿಕಟಪೂರ್ವ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳಲ್ಲಿ ಒಬ್ಬರಾದ ಜ್ಯೋತಿ ಅವರು ಈ ಸಂದರ್ಭದಲ್ಲಿ ಚಂದನ ‘ ವಾಹಿನಿಯಲ್ಲಿ ಮಧುರ ಮಧುರವೀ ಮಂಜುಳಗಾನ ‘ ಎಂಬ ಚಿತ್ರಗೀತೆ ಕುರಿತ ಮೌಲಿಕ ಕಾರ್ಯಕ್ರಮದ ಯಶೋಗಾಥೆಗೆ ಕಾರಣರಾದ ನಿರ್ದೇಶಕ ಮಹೇಶ ಜೋಶಿಯವರ ಸೇವೆಯನ್ನು ಸ್ಮರಿಸಿ ಅವರಿಗೆ ‘ ಮನಸು ಮಾಗಿದ ಸುಸ್ವರ ‘ ಕೃತಿಯ ಗೌರವ ಪ್ರತಿಯಿತ್ತು ಗೌರವಿಸಿದ್ರು .

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಮೂರನೇ ಬಾರಿ ಆಯ್ಕೆಯಾಗಿರುವ ಶ್ರೀ ನೀಲಾವರ ಸುರೇಂದ್ರ ಅಡಿಗರಿಗೂ ಶುಭ ಕೋರಿ ಕೃತಿಯ ಗೌರವ ಪ್ರತಿಯನ್ನು ನೀಡಿದರು.

- Advertisement -

Latest News

error: Content is protected !!