Thursday, June 4, 2026
Homeಕರಾವಳಿಉಚ್ಚಿಲ: ಶ್ರೀ ಮಹಾಲಕ್ಷ್ಮೀ ದೇವಿಯ ಸ್ವರ್ಣ ಕಳಶದ ಸ್ವರ್ಣ ಸಂಗ್ರಹ ಹಾಗೂ ಧನಸಂಗ್ರಹ ಸಮರ್ಪಣ ಕಾರ್ಯಕ್ರಮ

ಉಚ್ಚಿಲ: ಶ್ರೀ ಮಹಾಲಕ್ಷ್ಮೀ ದೇವಿಯ ಸ್ವರ್ಣ ಕಳಶದ ಸ್ವರ್ಣ ಸಂಗ್ರಹ ಹಾಗೂ ಧನಸಂಗ್ರಹ ಸಮರ್ಪಣ ಕಾರ್ಯಕ್ರಮ

- Advertisement -
- Advertisement -

ಉಚ್ಚಿಲ ಶ್ರೀ ಮಹಾಲಕ್ಷ್ಮೀಯ ಅಮ್ಮನ ಸ್ವರ್ಣ ಕಳಶದ ಕುಂದಾಪುರ ಹಾಗೂ ಉಡುಪಿ ವಲಯಗಳ ಸ್ವರ್ಣ ಸಂಗ್ರಹ ಹಾಗೂ ಧನಸಂಗ್ರಹದ ಸಮರ್ಪಣ ಕಾರ್ಯಕ್ರಮ ಇಂದು ಬಗ್ವಾಡಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಿಂದ ಸಮರ್ಪಣ ವಿಶೇಷ ರಥದ ಮೂಲಕ ಆರಂಭಗೊಂಡಿತು.

ನಂತರ ಕೋಟಾದ ಹಳವು ಮಕ್ಕಳ ತಾಯಿ ಶ್ರೀ ಅಮೃತೇಶ್ವರಿ ದೇವಸ್ಥಾನಕ್ಕೆ ಆಗಮಿಸಿ, ಬೆಣ್ಣೆ ಕುದ್ರು ಬಾರ್ಕೂರು ಶ್ರೀ ಕುಲಮಾಹಾಸ್ತ್ರೀ ಅಮ್ಮನ ಸಾನ್ನಿಧ್ಯಕ್ಕೆ ಬಂದು ವಿಶೇಷ ಪೂಜೆಯ ಸಲ್ಲಿಸಿ ಪ್ರಾರ್ಥಸಿ ಉಚ್ಚಿಲ ಶ್ರೀ ಮಹಾಲಕ್ಷ್ಮಿ ಅಮ್ಮನ ಕ್ಷೇತ್ರಕ್ಕೆ ಸಮರ್ಪಿಸಲಾಯಿತು.

ಈ ಕಾರ್ಯವು ಮೊಗವೀರ ಸಮಾಜದ ಅಗ್ರಮಾನ್ಯ ನಾಯಕರು, ಮಾರ್ಗದರ್ಶಕರಾದ ನಾಡೋಜ ಡಾ.ಜಿ.ಶಂಕರ್ ರವರ ದಿವ್ಯ ಉಪಸ್ಥಿತಿಯಲ್ಲಿ ಜರಗಿತು.

ಈ ಕಾರ್ಯಕ್ರಮದ ವಿಶೇಷ ಸಭೆ ಉಚ್ಚಿಲ ಮೊಗವೀರ ಭವನದಲ್ಲಿ ನಡೆಸಿ ಸ್ವರ್ಣ ಕಳಶ ಸಮಿತಿಯ ಎಲ್ಲಾ ವಲಯಗಳ ಅಧ್ಯಕ್ಷರಿಗೆ , ಉಚ್ಚಿಲ ಅಮ್ಮನ ಸ್ವಯಂಸೇವಕರಿಗೆ ಅಭಿನಂದನಾ ನುಡಿ ಸಲ್ಲಿಸಲಾಯಿತು .

- Advertisement -

Latest News

error: Content is protected !!