Thursday, June 4, 2026
Homeಕರಾವಳಿಸವಣಾಲು: ಶ್ರೀ ಆತ್ಮಾನಂದ ಅವಧೂತರು ದೈವಾಧೀನ !

ಸವಣಾಲು: ಶ್ರೀ ಆತ್ಮಾನಂದ ಅವಧೂತರು ದೈವಾಧೀನ !

- Advertisement -
- Advertisement -

ಬೆಳ್ತಂಗಡಿ: ಶ್ರೀ ಆತ್ಮಾನಂದ ಅವಧೂತರು (ಕೇಶವ ಭಟ್ ಮಲ್ಲರೋಡಿ) ಅಸೌಖ್ಯದಿಂದ ತಮ್ಮ ಪೂರ್ವಾಶ್ರಮದ ಸ್ವಗೃಹ ಸವಣಾಲು ಗ್ರಾಮದ ಮಲ್ಲರೋಡಿ ಮನೆಯಲ್ಲಿ ನ.17 ರಂದು ದೈವಾಧೀನ ಆಗಿರುತ್ತಾರೆ.

ಪ್ರಗತಿಪರ ಕೃಷಿಕರಾಗಿದ್ದ ಇವರು ಗೋಕರ್ಣದಲ್ಲಿ ಸನ್ಯಾಸ ದೀಕ್ಷೆ ಪಡೆದು ಗಾನಗಾಪುರದ ದತ್ತಾತ್ರೇಯ ಪೀಠ, ವರದಪುರಿ ಶ್ರೀಧರ ಆಶ್ರಮ, ಬದರಿನಾಥ ,ಕೇದಾರನಾಥ,ಕಾಶಿ ಮತ್ತು ಹಿಮಾಲಯದಲ್ಲಿ ಸಾಧನೆ ನಡೆಸಿದ್ದರು.

ಸನ್ಯಾಸ ಸಾಧನೆ ಸಂದರ್ಭ ಅವರ ಆರೋಗ್ಯದಲ್ಲಿ ಏರುಪೇರು ಆದ ಕಾರಣ ತಮ್ಮ ಊರಿಗೆ ಬಂದಿದ್ದರು. ಸವಣಾಲು ಕಾಳಿ ಬೆಟ್ಟ ಶ್ರೀ ದುರ್ಗಾ ಕಾಳಿಕಾಂಬ ದೇವಸ್ಥಾನದ ಸಂಸ್ಥಾಪಕರಾಗಿ , ಚಂದ್ಕೂರು ಶ್ರೀ ದುರ್ಗಪರಮೇಶ್ವರೀ ದೇವಸ್ಥಾನದ ಅಭಿವೃದ್ಧಿಯಲ್ಲಿ ಸಕ್ರಿಯರಾಗಿದ್ದರು.

ಇವರು ಎಲ್ಲಾ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಗೋಕರ್ಣದ ವೇದ ವಿದ್ವಾಂಸರಿಂದ ಸಮಾಧಿಯ ಎಲ್ಲಾ ವಿಧಿವಿಧಾನಗಳನ್ನು ಮಲ್ಲರೋಡಿ ಮನೆಯಲ್ಲಿ ನಡೆಸಲಾಯಿತು.

- Advertisement -

Latest News

error: Content is protected !!