Wednesday, June 24, 2026
Homeತಾಜಾ ಸುದ್ದಿಅಪ್ಪಂದಿರ ದಿನಕ್ಕೆ ವಿಶೇಷ ಹಾಡು ಬರೆಸಿ ಬಿಡುಗಡೆ ಮಾ‌ಡಿಸಿದ ವಿಧಾನಸಭೆ ವಿಪಕ್ಷ ನಾಯಕ ಅಶೋಕ್

ಅಪ್ಪಂದಿರ ದಿನಕ್ಕೆ ವಿಶೇಷ ಹಾಡು ಬರೆಸಿ ಬಿಡುಗಡೆ ಮಾ‌ಡಿಸಿದ ವಿಧಾನಸಭೆ ವಿಪಕ್ಷ ನಾಯಕ ಅಶೋಕ್

- Advertisement -
- Advertisement -

ಬೆಂಗಳೂರು: ಇಂದು ವಿಶ್ವ ಅಪ್ಪಂದಿರ ದಿನಾಚರಣೆಯ ಹಿನ್ನೆಲೆಯಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಬೆಂಗಳೂರಿನಲ್ಲಿ ವಿಭಿನ್ನ ಕಾರ್ಯಕ್ರಮ ಆಯೋಜಿಸಿದ್ದರು.

ಅಪ್ಪಂದಿರ ದಿನದ ವಿಶೇಷವಾಗಿ ‘ನಿಜ ನಾಯಕ ಅಪ್ಪ’ ಎಂಬ ಕನ್ನಡ ಭಾವಚಿತ್ರಗೀತೆಯನ್ನು ಬಿಡುಗಡೆ ಮಾಡಲಾಗಿದೆ.ತಮ್ಮ ಅಪ್ಪನ ನೆನಪಿಗೆ ಈ ಹಾಡನ್ನು ಖುದ್ದು ಆಸಕ್ತಿ ವಹಿಸಿ ವಿಪಕ್ಷ ನಾಯಕ ಅಶೋಕ್ ಬರೆಸಿದ್ದಾರೆ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿ ಸಂಗೀತ ‌ನೀಡಿದ್ದು, ಗಾಯಕ ರಾಜೇಶ್ ಕೃಷ್ಣನ್ ಹಾಡಿದ್ದಾರೆ.

ರಾಜ್ಯಸಭಾ ಸದಸ್ಯ ಮತ್ತು ಚಲನಚಿತ್ರ ಜಗ್ಗೇಶ್, ಚಿತ್ರನಟರಾದ ಗಣೇಶ್, ಪ್ರಜ್ವಲ್ ದೇವರಾಜ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಬೆಂಗಳೂರಿನ ಜಯನಗರದ ಜೆಎಸ್ ಎಸ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.

- Advertisement -

Latest News

error: Content is protected !!