Friday, June 5, 2026
Homeತಾಜಾ ಸುದ್ದಿಜಸ್ಟ್ 500 ರೂಪಾಯಿಯಲ್ಲಿ ಮದುವೆಯಾಗಿ ಮಾದರಿಯಾದ ಜೋಡಿ

ಜಸ್ಟ್ 500 ರೂಪಾಯಿಯಲ್ಲಿ ಮದುವೆಯಾಗಿ ಮಾದರಿಯಾದ ಜೋಡಿ

- Advertisement -
- Advertisement -

ಮಧ್ಯಪ್ರದೇಶ: ನಾವೆಲ್ಲಾ ಮದುವೆಗಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡುವವರನ್ನು ನೋಡಿದ್ದೇವೆ. ಆದರೆ ಮಧ್ಯಪ್ರದೇಶದಲ್ಲಿ  ಸೇನಾ ಮೇಜರ್ ಹಾಗೂ ಮಹಿಳಾ ಜಡ್ಜ್ ಕೇವಲ 500 ರೂಪಾಯಿ ಖರ್ಚುಮಾಡಿ ಸರಳವಾಗಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅತ್ಯಂತ ಸರಳವಾಗಿ ಮದುವೆಯಾಗಿರುವ ಈ ಜೋಡಿ ಭೋಪಾಲ್ ನಿವಾಸಿಗಳಾಗಿದ್ದಾರೆ. ಶಿವಾಂಗಿ ಜೋಶಿ ಮತ್ತು ಅನಿಕೇತ್ ಚತುರ್ವೇದಿ ಯಾವುದೇ ಆಡಂಬರವಿಲ್ಲದೇ ಮದುವೆಯಾಗುವ ಮೂಲಕ ಹಲವರಿಗೆ ಸ್ಫೂರ್ತಿಯಾಗಿದ್ದಾರೆ. ಸಮಾಜಕ್ಕೆ ಸಂದೇಶ ನೀಡುವ ಉದ್ದೇಶದಿಂದಲೇ ಕುಟುಂಬಸ್ಥರ ಅನುಮತಿ ಪಡೆದು ಜಡ್ಜ್ ಮುಂದೆಯೇ ಕೆಲವು ಮಂದಿ ಕುಟುಂಬಸ್ಥರ ಸಮ್ಮುಖದಲ್ಲಿ ಕೋರ್ಟ್‍ನಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.

ಸದ್ಯ ಅನಿಕೇತ್ ಲಡಾಖ್‍ನಲ್ಲಿ ಭಾರತೀಯ ಸೇನೆಯಲ್ಲಿದ್ದಾರೆ. ಶಿವಾಂಗಿ ಸಿಟಿ ಮೆಜಿಸ್ಟ್ರೇಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಜೋಡಿ 2 ವರ್ಷಗಳ ಹಿಂದೆ ಎಂಗೇಜ್‍ಮೆಂಟ್ ಮಾಡಿಕೊಂಡಿದ್ದರು. ಆದರೆ ಕೊರೊನಾ ಇರುವ ಕಾರಣದಿಂದಾಗಿ ಹಲವು ಬಾರಿ ಇವರು ಮದುವೆಯನ್ನು ಮುಂದೂಡಲಾಗಿತ್ತು. ಇದೀಗ ಇವರು ಸರಳವಾಗಿ ಮದುವೆಯಾಗುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರಿದ್ದಾರೆ.

ದಂಪತಿ ಮದುವೆಯಲ್ಲಿ ಅತಿಯಾದ ಖರ್ಚು ಮಾಡುವುದರಿಂದ ಹುಡುಗಿಯ ಕುಟುಂಬಕ್ಕೆ ಹೊರೆಯಾಗುವುದಲ್ಲದೆ, ಹಣದ ದುರುಪಯೋಗಕ್ಕೂ ಕಾರಣವಾಗುತ್ತದೆ. ಹೀಗಾಗಿ ನವು ಸರಳವಾಗಿ ಮದುವೆಯಾಗುವ ಮೂಲಕವಾಗಿ ಸಮಾಜಕ್ಕೆ ಸಂದೇಶವನ್ನು ಕೋಡಬೇಕು ಎಂದುಕೊಂಡಿದ್ದೇವು ಎಂದು ನವದಂಪತಿ ಹೇಳಿದ್ದಾರೆ.

- Advertisement -

Latest News

error: Content is protected !!