- Advertisement -
![]()
- Advertisement -
ಮಂಗಳೂರಿನ ಉದ್ಯಮಿ ಪ್ರಕಾಶ್ ಕುಂಪಲ ಅವರು ತಮ್ಮ ಪತ್ನಿ ಎಂದಿಗೂ ಮರೆಯಲಾಗದ ಉಡುಗೊರೆಯೊಂದನ್ನು ನೀಡಿದ್ದಾರೆ. ಪತ್ನಿ ಸೀಮಂತದ ವೇಳೆ ಹೆಲಿಕಾಫ್ಟರ್ ಮೂಲಕ ಹೂವಿನ ಸುರಿಮಳೆಗೈದು ಅವರಿಗೆ ಬಿಗ್ ಸಪ್ರೈಸ್ ಕೊಟ್ಟಿದ್ದಾರೆ.

ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ನಡೆದ ಉದ್ಯಮಿ ಪ್ರಕಾಶ್ ಕುಂಪಲ ಅವರು ತಮ್ಮ ಪತ್ನಿ ಅರ್ಪಿತಾ ಅವರ ಸೀಮಂತ ಕಾರ್ಯಕ್ರಮವನ್ನು ‘ಕೆಜಿಎಫ್’ ಸಿನಿಮಾ ಮಾದರಿಯಲ್ಲಿ ಅದ್ಧೂರಿಯಾಗಿ ಆಚರಿಸಲಾಗಿದೆ. ಈ ವಿಶೇಷ ಸಮಾರಂಭದಲ್ಲಿ ಪತ್ನಿಗಾಗಿ ಹೆಲಿಕಾಪ್ಟರ್ ಮೂಲಕ ಹೂವಿನ ಸುರಿಮಳೆಗೈಯುವ ಮೂಲಕ ಎಂದೂ ಮರೆಯಲಾಗದ ಸರ್ಪ್ರೈಸ್ ಉಡುಗೊರೆ ಕೊಟ್ಟಿದ್ದಾರೆ. ಸಿನಿಮೀಯ ಶೈಲಿಯ ಈ ಅದ್ಧೂರಿ ಎಂಟ್ರಿ ಮತ್ತು ಹೂವಿನ ಮಳೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಪತಿ ಕೊಟ್ಟ , ಸಪ್ರೈಸ್ ಗೆ ಅರ್ಪಿತಾ ಫುಲ್ ಖುಷಿಯಾಗಿದ್ದಾರೆ.
- Advertisement -


