ಕೊಕ್ಕಡ: ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಸೌತಡ್ಕ ಇದರ ವತಿಯಿಂದ ಪ್ರಧಾನ ಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ಹಾಗೂ ಮುಖ್ಯಮಂತ್ರಿಗಳ ಕೊವಿಡ್ ಪರಿಹಾರ ನಿಧಿಗೆ ತಲಾ 1 ಲಕ್ಷ ಮೊತ್ತದ ಚಕ್ ಅನ್ನು ಟ್ರಸ್ಟ್ ಅಧ್ಯಕ್ಷ ಕೆ. ಕೃಷ್ಣ ಭಟ್ ರವರು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರಿಗೆ ಟ್ರಸ್ಟ್ ಆವರಣದಲ್ಲಿ ಹಸ್ತಾಂತರಿಸಿದರು.
ದೇಶದೆಲ್ಲೆಡೆ ಮಹಾಮಾರಿ ಕೋವಿಡ್ 19 ನಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದು ಈ ಸಂದರ್ಬದಲ್ಲಿ ಸಾಮಾಜಿಕ ಸೇವೆಯನ್ನು ನಡೆಸಿಕೊಂಡು ಬರುತ್ತಿರುವ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ವತಿಯಿಂದ ಕೇಂದ್ರ ಹಾಗೂ ರಾಜ್ಯ ಸರಕಾರದ ಪರಿಹಾರ ನಿಧಿಗೆ ಟ್ರಸ್ಟ್ ನ ವತಿಯಿಂದ ಒಟ್ಟು 2 ಲಕ್ಷ ಹಣವನ್ನು ಪರಿಹಾರ ನಿಧಿಗೆ ಒದಗಿಸುವ ಮೂಲಕ ಟ್ರಸ್ಟ್ ಕೂಡಾ ಜನರ ಸಂಕಷ್ಟಕ್ಕೆ ನಿಲ್ಲುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಕೃಷ್ಣ ಭಟ್ ಹಾಗೂ ಟ್ರಸ್ಟಿ ಪೂವಾಜೆ ಕುಶಾಲಪ್ಪ ಗೌಡ ಮಾಹಿತಿ ನೀಡಿದರು.
ಈ ಸಂದರ್ಬದಲ್ಲಿ ಸಂದೇಶ್ ಶಬರಾಯ ಗಾನಗಿರಿ, ದಾಮೋದರ ಶೆಟ್ಟಿ ನೂಜೆ, ಹಾಗೂ ಎಂಡೋವಿರೋಧಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು, ತುಕ್ರಪ್ಪ ಶೆಟ್ಟಿ ನೂಜೆ, ಸೌತಡ್ಕ ದೇವಳದ ಲೆಕ್ಕಪರಿಶೋಧಕ ಶ್ರೀಕೃಷ್ಣ ಭಟ್ ಹಿತ್ತಿಲು, ಶಿವ ಸುಬ್ರಹ್ಮಣ್ಯ ಭಟ್ ಹಿತ್ತಿಲು, ಯೋಗಿಶ್ ಗೌಡ ಆಲಂಬಿಲ, ಪುರಂದರ ಗೌಡ ಕಡಿರ, ಮೊದಲಾದವರು ಉಪಸ್ಥಿತರಿದ್ದರು.