Monday, November 2, 2026
Homeಕರಾವಳಿಮಂಗಳೂರುಸೌಜನ್ಯ ಕೊಲೆ ಹಾಗೂ ಅತ್ಯಾಚಾರ ಪ್ರಕರಣದ ಮರುತನಿಖೆ ಹಿನ್ನೆಲೆ : ಮಂಗಳೂರು SIT ಕಚೇರಿಗೆ ...

ಸೌಜನ್ಯ ಕೊಲೆ ಹಾಗೂ ಅತ್ಯಾಚಾರ ಪ್ರಕರಣದ ಮರುತನಿಖೆ ಹಿನ್ನೆಲೆ : ಮಂಗಳೂರು SIT ಕಚೇರಿಗೆ ವಿಚಾರಣೆಗಾಗಿ ಸೌಜನ್ಯ ಕುಟುಂಬಸ್ಥರ ಆಗಮನ

- Advertisement -
- Advertisement -

ಮಂಗಳೂರು: ಧರ್ಮಸ್ಥಳದ ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ (SIT), ವಿಚಾರಣೆಗಾಗಿ ಸೌಜನ್ಯ ಕುಟುಂಬಸ್ಥರಿಗೆ ನೀಡಿದ್ದ ಸೂಚನೆಯಂತೆ ನವೆಂಬರ್ 2 (ಸೋಮವಾರ) ರಂದು ಮಧ್ಯಾಹ್ನ ಸೌಜನ್ಯ ಕುಟುಂಬ ಸದಸ್ಯರು ಮಂಗಳೂರಿನ ಎಸ್‌ಐಟಿ ಕಚೇರಿಗೆ ಹಾಜರಾಗಿದ್ದಾರೆ.

ಸೌಜನ್ಯ ಅವರ ತಾಯಿ ಕುಸುಮಾವತಿ, ಮಾವಂದಿರಾದ ವಿಠಲ ಗೌಡ ಹಾಗೂ ಪುರಂದರ ಗೌಡ ಮತ್ತು ಸಂಬಂಧಿ ತುಕಾರಾಂ ಗೌಡ ಅವರು ಎಸ್‌ಐಟಿ ಕಚೇರಿಗೆ ಆಗಮಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಕುಟುಂಬದ ಪ್ರಮುಖ ಸದಸ್ಯರ ವಿಚಾರಣೆ ನಡೆಸುತ್ತಿದ್ದು, ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಸೌಜನ್ಯ ಕುಟುಂಬದ ಭೇಟಿಯು ತನಿಖೆಯಲ್ಲಿ ಮಹತ್ವದ ತಿರುವು ಪಡೆದುಕೊಳ್ಳುವ ನಿರೀಕ್ಷೆಯಿದೆ.

- Advertisement -

Latest News

error: Content is protected !!