Thursday, June 4, 2026
Homeತಾಜಾ ಸುದ್ದಿಕುಡಿಯೋದಕ್ಕೆ ಹಣ ನೀಡದ ತಾಯಿ: ಕೋಪದಲ್ಲಿ ತಾಯಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ...

ಕುಡಿಯೋದಕ್ಕೆ ಹಣ ನೀಡದ ತಾಯಿ: ಕೋಪದಲ್ಲಿ ತಾಯಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಮಗ

- Advertisement -
- Advertisement -

ಕಲಬುರಗಿ: ಕುಡಿಯಲು ಹಣ ನೀಡಿಲ್ಲ ಅನ್ನೋ ಕಾರಣಕ್ಕೆ ಪಾಪಿ ಮಗನೊಬ್ಬ ತಾಯಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಲ್ಲೂರು ಕೆ ಗ್ರಾಮದಲ್ಲಿ ನಡೆದಿದೆ.

ಭೀಮಬಾಯಿ ಪೂಜಾರಿ(75) ಕೊಲೆಯಾದ ದುರ್ದೈವಿ. ಈಕೆಯನ್ನು ಕಿರಿಯ ಪುತ್ರ ಯಲ್ಲಪ್ಪ ಪೂಜಾರಿ ಕೊಲೆ ಮಾಡಿದ್ದಾನೆ. ಇಂದು ನಸುಕಿನ ಜಾವ ಈ ಕೃತ್ಯ ನಡೆದಿದೆ.

ಮದ್ಯ ಕುಡಿಯಲು ಹಣ ನೀಡಲಿಲ್ಲವೆಂದು ಯಲ್ಲಪ್ಪ ಹೆತ್ತಮ್ಮನನ್ನೇ ಕೊಂದಿದ್ದಾನೆ. ಈ ಬಗ್ಗೆ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!